ತಮ್ಮ ಮದುವೆ ಬಗ್ಗೆ ಹೇಳಿದ್ರು ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಕೊನೆಗೆ ಉತ್ತರಿಸಿದರು. ದೆಹಲಿಯಲ್ಲಿ ನಡೆದ 112ನೇ ವರ್ಷಿಕ ಅಧಿವೇಶನ ಹಾಗೂ ಪಿಎಚ್ ಡಿ ಪ್ರಶಸ್ತಿ ಸಮಾರಂಭದ ವೇಳೆ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಕೊನೆಗೆ ಉತ್ತರಿಸಿದ್ದಾರೆ. ದೆಹಲಿಯಲ್ಲಿ ನಡೆದ 112ನೇ ವರ್ಷಿಕ ಅಧಿವೇಶನ ಹಾಗೂ ಪಿಎಚ್ ಡಿ ಪ್ರಶಸ್ತಿ ಸಮಾರಂಭದ ವೇಳೆ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲನೇಯ ಪ್ರಶ್ನೆ ಎಂದು ಮಾತು ಆರಂಭಿಸಿದ ವಿಜೇಂದರ್ ಸಿಂಗ್ ರಾಹುಲ್ ಯಾವಾಗ ಮದುವೆಯಾಗುತ್ತೀರಿ ಎಂದು ಕೇಳಿದ್ರು, ಮತ್ತೊಂದು ಪ್ರಶ್ನೆ ನೀವು ಪ್ರಧಾನಿ ಆದ್ರೆ ಕ್ರೀಡಾ ಕ್ಷೇತ್ರ ಅಭಿವೃದ್ಧಿಗೆ ಏನು ಮಾಡುತ್ತೀರಾ ಎಂದು ಕೇಳಿದರು.
ಮದುವೆ ಕುರಿತು ಉತ್ತರ ನೀಡಲು ಹಿಂದೇಟು ಹಾಕಿದ ರಾಹುಲ್ , ಉತ್ತರಿಸಲು ಹಿಂಜರಿದರು ಆಗಾಗ ಬರುತ್ತದೆ. ಇದೇ ವೇಳೆ ವಿಜೇಂೀದರ್ ಸಿಂಗ್ ಉತ್ತರಕ್ಕಾಗಿ ಒತ್ತಾಯ ಮಾಡಿದ್ರು. ನಾನು ವಿಧಿಯ ಮೇಲೆ ನಂಬಿಕೆ ಇಟ್ಟವನು, ನನ್ನ ಮದುವೆ ಯಾವಾಗ ಆಗಬೇಕೆಂದಿದಿಯೋ ಅಂದೇ ಆಗುತ್ತದೆ, ಎಂದು ಉತ್ತರಿಸಿದ್ದಾರೆ. ಇನ್ನು ಕ್ರೀಡೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ಜಪಾನಿ ಮಾರ್ಷಲ್ ಆರ್ಟ್ಸ್ ಐಕಿಡೋ ನಲ್ಲಿ ಬ್ಲಾಕ್ ಬೆಲ್ಟ್ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಸಾರ್ವಜನಿಕವಾಗಿ ಎಲ್ಲು ಮಾತನಾಡಿಲ್ಲ ಎಂದು ಅವರು ಉತ್ತರಿಸಿದರು.
Comments