ಪ್ರಜ್ವಲ್ ರಾಜಕೀಯ ನಡೆಯ ಬಗ್ಗೆ ತುಟಿ ಬಿಚ್ಚಿದ ಎಚ್ ಡಿ ಕೆ

ಅಣ್ಣನ ಮಗನ ರಾಜಕೀಯದ ಬಗ್ಗೆ ಮಾತನಾಡುತ್ತ ಪ್ರಜ್ವಲ್ ಭವಿಷ್ಯದ ನಾಯಕ ಅನ್ನೋದ್ರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳ ರಾಜಕಾರಣದ ಬಗ್ಗೆ ಹಲವಾರು ವರ್ಷಗಳಿಂದ ತೀರ್ಮಾನ ಮಾಡಿಕೊಂಡಿದ್ದಾರೆ….
ಈ ಬಗ್ಗೆ ಹಲವಾರು ವರ್ಷಗಳಿಂದ ತೀರ್ಮಾನಿಸಿ ಹೊರಟ್ಟಿದ್ದಾನೆ ಎಂದು ಎಚ್ ಡಿಕೆ ಹೇಳಿದ್ದಾರೆ. ಪ್ರಜ್ವಲ್ ಗೆ ಯಾರ ಆಶ್ರಯವು ಬೇಡ ಅಂದರೆ ಕುಮಾರಸ್ವಾಮಿ , ರೇವಣ್ಣ , ದೇವೇಗೌಡರ ಹೆಸರು ಹೇಳಿಕೊಂಡು ರಾಜಕೀಯ ಮಾಡುವಂತಹ ಪರಿಸ್ಥಿಯಲ್ಲಿ ಇಲ್ಲ , ಈಗಾಗಲೇ ಸಾಕಷ್ಟು ಬೆಳೆದಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ತನ್ನದೇ ಆದ ಪ್ರಭಾವ ಮೂಡಿಸಿದ್ದಾರೆ. ಪ್ರಜ್ವಲ್ ಗೆ ಟಿಕೆಟ್ ನ್ನು ನಾವಾಗಿಯೇ ಕರೆದು ಕೊಡುವಂತಹ ಪರಿಸ್ಥಿತಿ ಬರುತ್ತದೆ. ಅಂತಹ ನಾಯಕತ್ವ ಪ್ರಜ್ವಲ್ನಲ್ಲಿ ಇದೆ. ಆಗಂತ ಟಿಕೆಟ್ ನ್ನು ಕೊಡಲೇಬಾರದು ಅಂತ ಏನು ಇಲ್ಲ . ಕುಟುಂಬದಲ್ಲಿ ಇಬ್ಬರು ಮಾತ್ರ ಸ್ಪರ್ಧಿಸಬೇಕು ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
Comments