ಬೆಂಗಳೂರಿನಲ್ಲಿ ವಾಸವಿರುವ ಬಡವರಿಗೆ ಸಿಎಂ ನಿಂದ ಸಿಹಿ ಸುದ್ದಿ

ಐದು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಬಡವರಿಗೆ ಈ ಯೋಜನೆಯಡಿ ಮನೆ ಸಿಗಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಮನೆ ಪಡೆಯಬಹುದಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಮಾಡುವುದಾಗಿ ಸಿಎಂ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಡ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬಡವರಿಗೆ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ವಸತಿ ಯೋಜನೆ ಅನುಷ್ಠಾನ ಕುರಿತು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ನಂತ್ರ ಸುದ್ಧಿಗೋಷ್ಠಿ ನಡೆಸಿದ್ರು. ಮನೆ ಹಂಚಿಕೆ ವಿಚಾರದಲ್ಲಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಪರಿಶಿಷ್ಠ ಜಾತಿ ಪಂಗಡದವರು 50 ಸಾವಿರ ನೀಡಬೇಕು. ಹಾಗೆ ಉಳಿದವರು 1 ಲಕ್ಷ ರೂಪಾಯಿ ನೀಡಿ ಮನೆ ಪಡೆಯಬಹುದಾಗಿದೆ ಐದುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
Comments