ಟಿಪ್ಪುನ ಕೊಂಡಾಡಿ ಪೇಚಿಗೆ ಸಿಲುಕಿದ ರಾಷ್ಟ್ರಪತಿ ಕೋವಿಂದ್
ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ ಅವರು ಟಿಪ್ಪು ಸಾಧನೆಯ ಕುರಿತು ಕೊಂಡಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು. ಈ ವಿಚಾರದಿಂದ ಬಿಜೆಪಿಗೆ ಇರುಸು ಮುರುಸಾಗಿದೆ.
ಟಿಪ್ಪು ಸುಲ್ತಾನ ಒಬ್ಬ ಅಪ್ರತಿಮ ವೀರಯೋಧ. ರಾಕೆಟ್ ತಂತ್ರಜ್ಞಾನದ ಜನಕನಾಗಿದ್ದ ಟಿಪ್ಪು ಸುಲ್ತಾನ ಅವರ ಶೌರ್ಯ ಹಾಗೂ ಸಾಧನೆಯ ಕುರಿತು ಮೆಚ್ಚಲೆಬೇಕು ಎಂದು ರಾಷ್ಟ್ರಪತಿ ಕೋವಿಂದ್ ಹೇಳಿದರು. ಈ ಹಿಂದಿನಿಂದಲೇ ಬಿಜೆಪಿಯವರು ಟಿಪ್ಪು ಜಯಂತಿ ಕುರಿತು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇದೀಗ ರಾಷ್ಟ್ರಪತಿ ಕೋವಿಂದ್ ಅವರು ಬಿಜೆಪಿ ವಿರೋಧದ ನಡುವೆಯು ಟಿಪ್ಪು ಸುಲ್ತಾನ್ ಸಾಧನೆಯನ್ನು ವಿಧಾನ ಸೌಧದ ಭಾಷಣದಲ್ಲಿ ಉಲ್ಲೇಖಿಸಿದ್ದು ಪೇಚಿಗೆ ಸಿಲುಕಿದಂತೆ ಮಾಡಿದೆ.
Comments