ಭಾಷಣ ವಿಚಾರದಲ್ಲಿ ನಂಬರ್ ಒನ್ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತ್ಯುತ್ತಮ ಭಾಷಣಕಾರರು. 2014 ಮೇ.26ರಂದು ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ಅಲ್ಲಿಂದ ಪ್ರತಿ ಮೂರು ದಿನಗಳಲ್ಲಿ ಎರಡು ಭಾಷಣ ಮಾಡಿದ್ದಾರೆ ಮೋದಿ. ಪ್ರಧಾನ ಮಂತ್ರಿಯಾದ ನಂತ್ರ ಈವರೆಗೆ ಅಂದ್ರೆ 41 ತಿಂಗಳಲ್ಲಿ 775 ಭಾಷಣ ಮಾಡಿದ್ದಾರೆ.
2014 ಮೇ.26ರಂದು ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ಅಲ್ಲಿಂದ ಪ್ರತಿ ಮೂರು ದಿನಗಳಲ್ಲಿ ಎರಡು ಭಾಷಣ ಮಾಡಿದ್ದಾರೆ ಮೋದಿ. ಪ್ರಧಾನ ಮಂತ್ರಿಯಾದ ನಂತ್ರ ಈವರೆಗೆ ಅಂದ್ರೆ 41 ತಿಂಗಳಲ್ಲಿ 775 ಭಾಷಣ ಮಾಡಿದ್ದಾರೆ.ಇದನ್ನು ಬಿಜೆಪಿ ಮಾತ್ರವಲ್ಲ ವಿರೋಧ ಪಕ್ಷದ ನಾಯಕರೂ ಒಪ್ಪಿಕೊಂಡಿದ್ದಾರೆ. 2014ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಹೆಚ್ಚು ಗಮನ ಸೆಳೆದದ್ದು ಮೋದಿ ಭಾಷಣ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ತಿಂಗಳು ಸುಮಾರು 19 ಬಾರಿ ಭಾಷಣ ಮಾಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದ 10 ವರ್ಷ 1401 ಭಾಷಣ ಮಾಡಿದ್ದಾರೆ. ಪ್ರತಿ ತಿಂಗಳಿಗೆ ಸರಾಸರಿ 11 ಭಾಷಣ ಮಾಡಿದ್ದಾರೆ. ಮೋದಿ ಇನ್ನೂ ಐದು ವರ್ಷದ ಅಧಿಕಾರಾವಧಿ ಮುಗಿಸಿಲ್ಲ ಆಗ್ಲೇ 775 ಬಾರಿ ಭಾಷಣ ಮಾಡಿದ್ದಾರೆ. ಪಿಎಂ ಭಾಷಣವನ್ನು ವಿಶ್ಲೇಷಿಸಿದಾಗ ಮೋದಿ 2015ರಲ್ಲಿ ಹೆಚ್ಚು ಭಾಷಣ ಮಾಡಿದ್ದಾರೆಂಬುದು ತಿಳಿದು ಬಂದಿದೆ.
2015ರಲ್ಲೊಂದೇ ಮೋದಿ 264 ಬಾರಿ ಭಾಷಣ ಮಾಡಿದ್ದಾರೆ. ಈ ವರ್ಷ ಸಾಕಷ್ಟು ವಿದೇಶಿ ಪ್ರವಾಸ ಕೈಗೊಂಡಿರುವ ಮೋದಿ ಅಲ್ಲಿ 164 ಬಾರಿ ಭಾಷಣ ಮಾಡಿದ್ದಾರೆ.
Comments