ಜನಧನ ಯೋಜನೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಮದ್ಯಪಾನ ಇಳಿಕೆ ಕಂಡಿದೇಯೇ ?

ನವದೆಹಲಿ: ಪ್ರತಿಯೊಬ್ಬ ನಾಗರೀಕನ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ. ಪ್ರಧಾನ ಮಂತ್ರಿ ಕನಸಿನ ಯೋಜನೆ ಜನಧನ ಯೋಜನೆಗೆ ಈಗ ಪ್ರತಿಫಲ ಕಾಣುತ್ತಿದೆ ಅಂತ ಅನ್ನಿಸುತ್ತೆ
ನವದೆಹಲಿ: ಪ್ರತಿಯೊಬ್ಬ ನಾಗರೀಕನ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ. ಪ್ರಧಾನ ಮಂತ್ರಿ ಕನಸಿನ ಯೋಜನೆ ಜನಧನ ಯೋಜನೆಗೆ ಈಗ ಪ್ರತಿಫಲ ಕಾಣುತ್ತಿದೆ. ಗ್ರಾಮೀಣ ಭಾಗದಲ್ಲಿ ಜನರು ಹೆಚ್ಚಿನ ಪ್ರಮಾಣ ದಲ್ಲಿ ಉಳಿಕೆ ಮಾಡುತ್ತಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಜನರ ಮಧ್ಯಪಾನ, ತಂಬಾಕು ಸೇವನೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೂ ಜನಧನ ಖಾತೆ ಹೊಂದಿದವರಿಗೆ 1 ಲಕ್ಷ ರೂ. ವರೆಗೆ ವಿಮೆ ನೀಡಲಾಗುತ್ತಿದೆ. ಜತೆಗೆ ಸರ್ಕಾರದ ಸಬ್ಸಿಡಿ ಅನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ಅನುತ್ಪಾದಕ ವೆಚ್ಚಕ್ಕೆ ಕಡಿವಾಣ ಹಾಕಲು ಜನಧನ ಸಹಾಯಕವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಂಶೋಧನಾ ಘಟಕ ನೀಡಿರುವ ವರದಿಯಲ್ಲಿ ಈ ಕುರಿತು ವಿವರವನ್ನು ಕಾಣಬಹುದು. ಜನಧನ ಯೋಜನೆ ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ತೆರೆಯಲಾಗಿದೆ. ಗ್ರಾಮೀಣ ಜನರ ಅಭಿವೃದ್ಧಿಗೆ ಹಾಗೂ ಉಳಿತಾಯಕ್ಕೆ ಒತ್ತು ನೀಡಲಾಗುತ್ತಿದೆ. ಹಾಗೇ ಗ್ರಾಮೀಣ ಪ್ರದೇಶದ ಜನರು ಉಳಿತಾಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಜನಧನ ಖಾತೆಗಳಿಯಿಂದಾಗಿ ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.
Comments