ಮೋದಿ ಜೀ ನೀವು ಗುಜುರಾತಿನ ಜನರನ್ನು ಕೊಂಡುಕೊಳ್ಳಲು, ಅವರ ದನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ - ರಾಗಾ



ಗಾಂಧಿನಗರ : ಮೋದಿ ಜೀ ನೀವು ಗುಜುರಾತಿನ ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ , ಅವರ ದನಿಯನ್ನು ಹತ್ತಿಕ್ಕಲಾಗುವುದಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಗಾಂಧಿನಗರ : ಮೋದಿ ಜೀ ನೀವು ಗುಜುರಾತಿನ ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ , ಅವರ ದನಿಯನ್ನು ಹತ್ತಿಕ್ಕಲಾಗುವುದಿಲ್ಲ, ನೀವು ಜನರ ಎದುರು ಬೇಕಾದಷ್ಟು ಹಣ ಸುರಿಯಬಹುದು. ಇದರಿಂದ ನೀವು ಜನರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಹೀಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಡುಗಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ , ಗಾಂಧಿ ನಗರದಲ್ಲಿ ನಡೆಯುತ್ತಿರುವ ನವಸರ್ಜನ್ ಜನಾದೇಶ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದರು.
ಗುಜುರಾತಿನ ಯುವಕರು ಗುಣಮಟ್ಟದ ಶಿಕ್ಷಣ ಪಡೆದಿಲ್ಲ. ಉತ್ತಮ ಆರೋಗ್ಯ ಸಿಕ್ಕಿಲ್ಲ. ಮುಖ್ಯವಾಗಿ ಯುವಕರಿಗೆ ಶಿಕ್ಷಣ ಬೇಕಾಗಿದೆ. ಆದರೆ ನೀವು ಕಳೆದ 22 ವರ್ಷಗಳಲ್ಲಿ ಹಿಂದೆ ವಿಶ್ವವಿದ್ಯಾಲಯಗಳ ಜವಾಬ್ದಾರಿಯನ್ನು ಉದ್ಯಮಿಗಳಿಗೆ ವರ್ಗಾಯಿಸಿದ್ದೀರಿ. ಇದರಿಂದ ಯುವಕರಿಗೆ ವಿದ್ಯಾಭ್ಯಾಸ ಎನ್ನುವುದು ಮರೀಚಿಕೆಯಾದಂತಾಗಿದೆ. ಶಿಕ್ಷಣದ ವೆಚ್ಚ ದುಬಾರಿ ಆದ ಕಾರಣ ಅದರ ವೆಚ್ಚವನ್ನು ಭರಿಸಲಾಗದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ದೂರವೇ ಉಳಿದಿದ್ದಾರೆ ಎಂದು ಮೋದಿ ಅವರ ಮೇಲೆ ಕಿಡಿ ಕಾರಿದರು.
Comments