ಗುಂಡಿಗಳನ್ನು ಮುಚ್ಚಲು ಸಿಎಂ ನೀಡಿದ್ದ 15 ದಿನಗಳಲ್ಲಿ 2 ದಿನಗಳು ಮಾತ್ರ ಬಾಕಿ

23 Oct 2017 5:54 PM | Politics
507 Report

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ವಾಹನ ಸವಾರರು ಪ್ರಾಣ ಕಳೆದುಕೊಂಡ ಬಳಿಕ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ಧರಾಮಯ್ಯ ಇನ್ನು 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದ್ದರು.

ಸಿಎಂ ಸಿದ್ಧರಾಮಯ್ಯ ನಗರದ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು ಎಂದು 15 ದಿನಗಳ ಗಡುವು ನೀಡುತ್ತಾರೆ. ಆದರೆ ಅಧಿಕಾರಿಗಳು ಮಾತ್ರ ಎಲ್ಲವನ್ನು ಕೇಳಿಯೂ ಕೇಳದಂತೆ ಸುಮ್ಮನಿದ್ದಾರೆ. ಸಿಎಂ ನೀಡಿರುವ ಗಡುವು ಮುಕ್ತಾಯವಾಗಲು ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಆದರೆ ರಸ್ತೆ ಗುಂಡಿಗಳು ಮಾತ್ರ ಹಾಗೆ ತೆರೆದುಕೊಂಡಿದೆ. ಬೆಂಗಳೂರಿನಲ್ಲಿ ಸುಮಾರು 16 ಸಾವಿರಕ್ಕೂ ಹೆಚ್ಚು ಗುಂಡಿಗಳಿವೆ. ಇದರಲ್ಲಿ ಮುಕ್ಕಾಲು ಭಾಗ ಮುಚ್ಚಲಾಗಿದೆ. ಮಳೆಯಿಂದಾಗಿ ಕೆಲಸ ನಿಧಾನವಾಗಿದೆ ಎಂದು ಮೇಯರ್ ಹೇಳಿದ್ದಾರೆ. ಮೇಯರ್ ಏನೇ ಹೇಳಿದರೂ ರಸ್ತೆ ಗುಂಡಿಗಳು ಮಾತ್ರ ಹಾಗೆ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Edited By

Hema Latha

Reported By

Madhu shree

Comments

Cancel
Done