25 ಕೋಟಿ ಮುಸ್ಲಿಂರನ್ನು ಓಡಿಸಬೇಕೆ? ಕೇಂದ್ರ ಸಚಿವರಿಗೆ ಹೆಚ್ ಡಿಡಿ ಪ್ರಶ್ನೆ
ಬೆಂಗಳೂರು: ಟಿಪ್ಪು ಜಯಂತಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಕಿಡಿ ಕಾರಿದ್ದಾರೆ.

ಮಾಧ್ಯಮದವರ ಜತೆ ಮಾತನಾಡಿರುವ ಅವರು, ಅನಂತ ಕುಮಾರ್ ಹೇಳಿಕೆಯೇ ಅಪ್ರಬುದ್ಧ, ಒಬ್ಬ ಕೇಂದ್ರ ಸಚಿವನಿಗೆ ಇಂತಹ ಧೋರಣೆ ಸರಿ ಅಲ್ಲ. ಮುಸ್ಲಿಂರನ್ನು ವಿರೋಧಿಸಿಯೇ ನಾನು ಸಚಿವನಾಗಿದ್ದೇನೆ ಎನ್ನುತ್ತಾರೆ. ಹಾಗಾದರೆ ಪ್ರಮಾಣವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಏನು ಹೇಳಿದ್ದರು ಎಂದು ಪ್ರಶ್ನೆ ಮಾಡಿದರು.
ದೇಶದಲ್ಲಿ ಮುಸ್ಲಿಂರನ್ನು ಬಿಡುವುದು ಅಷ್ಟು ಸುಲಭವಲ್ಲ. ದೇಶದಲ್ಲಿರುವ 25 ಕೋಟಿ ಮುಸ್ಲಿಂರನ್ನು ಓಡಿಸಬೇಕೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
Comments