ಬಿಜೆಪಿ ರಾಮನ ಹೆಸರಿನ್ನು ರಾಜಕೀಯ ದಾಳವಾಗಿ ಬಳಸಿಕೊಂಡ್ರೆ ರಾಮನಿಂದ ಶಿಕ್ಷೆ ಖಂಡಿತ - ಲಾಲು ಪ್ರಸಾದ್ ಯಾದವ್



ಪಟನಾ: ಬಿಜೆಪಿ ಪಕ್ಷ ರಾಮನ ಹೆಸರನ್ನು ರಾಜಕೀಯ ದಾಳವಾಗಿ ಬಳಸಿಕೊಡರೆ ರಾಮ ನೀಡುವ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದರು.
ಪಟನಾ: ಬಿಜೆಪಿ ಪಕ್ಷ ರಾಮನ ಹೆಸರನ್ನು ರಾಜಕೀಯ ದಾಳವಾಗಿ ಬಳಸಿಕೊಡರೆ ರಾಮ ನೀಡುವ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಅವರು, ದೀಪಾವಳಿ ಅವರು ರಾಮನ ಹೆಸರಿನಲ್ಲಿ ರಾಜಕೀಯ ನಾಟಕ ವಾಡುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಧರ್ಮ ಹಾಗೂ ಪ್ರಾರ್ಥನೆ ವಿಚಾರದಲ್ಲಿ ವೈಯಕ್ತಿಕ ಸ್ವಾತಂತ್ರವಿದೆ. ಆದರೆ ಬಿಜೆಪಿಯವರು ಅದರಲ್ಲೂ ಮುಖ್ಯವಾಗಿ ಆದಿತ್ಯನಾಥ್ ಅವರು ರಾಜಕೀಯ ಆಟವಾಡುತ್ತಿದ್ದಾರೆ. ರಾಮನ ಹೆಸರಿನಲ್ಲಿ ರಾಜಕೀಯ ಆಟವಾಡುತ್ತಿರುವ ಆದಿತ್ಯನಾಥ್ ಅವರ ನಡುವಳಿಕೆಯನ್ನು ಜನರು ಅರಿತುಕೊಳ್ಳಬೇಕು.
ರಾಜಕೀಯದಲ್ಲಿ ಬೆಳೆಯುವ ಸಲುವಾಗಿ ರಾಮನ ಹೆಸರನ್ನು ಬಳಸಿಕೊಂಡಿದ್ದಲ್ಲಿ ರಾಮನ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದಿದ್ದಾರೆ.ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದಿತ್ಯನಾಥ್ ಅಯೋಧ್ಯೆಯಲ್ಲಿ ನಡೆಸಿದ ದೀಪಾವಳಿ ಕಾರ್ಯಕ್ರಮದಲ್ಲಿ ಲಾಲೂ ಖಂಡಿಸಿದರು.
Comments