ಉತ್ತರ ಕರ್ನಾಟಕದ ಜನತೆಗೆ ದೇವೇಗೌಡರ ಬಗ್ಗೆ ಅಭಿಮಾನವಿದೆ : ಎಚ್.ವಿಶ್ವನಾಥ್

ಉತ್ತರ ಕರ್ನಾಟಕದಲ್ಲಿ ದೇವೇಗೌಡರ ಬಗ್ಗೆ ಜನರಲ್ಲಿ ಅಭಿಮಾನವಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆಗೆ ದೇವೇಗೌಡರ ಶ್ರಮ ಹಾಗೂ ಪ್ರಯತ್ನಗಳ ಬಗ್ಗೆ ಜನ ಮೆಚ್ಚುಗೆಯ ಮಾತನಾಡುತ್ತಿದ್ದಾರೆ, ಆದರೆ ಪಕ್ಷ ಹಾಗೂ ನಾಯಕತ್ವದ ಬಗ್ಗೆ ಒಲವಿರುವ ಈ ಜನರನ್ನು ಮುನ್ನೆಡೆಸಲು ನಾಯಕರ ಕೊರತೆ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಪ್ರವಾಸ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮೆಚ್ಚಿಕೊಂಡು ಮತ್ತು ಜೆಡಿಎಸ್ ಪಕ್ಷವನ್ನು ಬಯಸುವ ಜನರು ರಾಜ್ಯದಲ್ಲಿ ಇದ್ದಾರೆ. ಆದರೆ, ಅವರನ್ನು ಮುನ್ನಡೆಸುವ ನಾಯಕರಿಗೆ ಕೊರತೆಯಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ 2013 ರಲ್ಲೇ ಜಾರಿಗೆ ಬಂದಿದೆ. ಆದರೆ, ಈವರೆಗೆ ಈ ಕಾಯಿದೆ ಆಧರಿಸಿ ಮೀಸಲು ಹುದ್ದೆಗಳ ಭರ್ತಿ ಆಗಿಲ್ಲ. ಸರ್ಕಾರ ಈವರೆಗೆ ಒಂದು ಸಭೆ ಮಾಡಿ ಅಸಮಾನತೆಯನ್ನು ಸಮಾನತೆಯ ದಾರಿಗೆ ತರುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.
Comments