ಅಮಿತ್ ಷಾ ಪುತ್ರನ ಆದಾಯವನ್ನು 'ಸ್ಪೀಡ್ ಟ್ರೈನ್' ಹೋಲಿಸಿದ ಸರ್ಜೆವಾಲ್

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ ಅವರ ಆದಾಯ ಸ್ಪೀಡ್ ಟ್ರೇನ್ ಥರ ಏರಿದ್ದು ಹೇಗೆ ? ಎಂದು ಕಾಂಗ್ರೆಸ್ ನ ಸಂವಹನ ವಿಭಾಗದ ಅಧ್ಯಕ್ಷ ಸರ್ಜೆವಾಲ್ ಪ್ರಶ್ನೆ ಮಾಡಿದ್ದಾರೆ.
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಪುತ್ರ ಜಯ್ ಷಾ ಅವರ ಆದಾಯ ಸ್ಪೀಡ್ ಟ್ರೇನ್ ಥರ ಏರಿದ್ದು ಹೇಗೆ ? ಎಂದು ಕಾಂಗ್ರೆಸ್ ನ ಸಂವಹನ ವಿಭಾಗದ ಅಧ್ಯಕ್ಷ ಸರ್ಜೆವಾಲ್ ಪ್ರಶ್ನೆ ಮಾಡಿದ್ದಾರೆ. ಆರ್ ಎಸ್ ಎಸ್ ಅಮಿತ್ ಷಾ ಅವರ ಪುತ್ರನ ಆದಾಯ ಏರಿಕೆ ಬಗ್ಗೆ ತನಿಖೆಗೆ ಒತ್ತಾಯ ಮಾಡುತ್ತಾ? ಅಡ್ವಾಣಿ ಅವರ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ಹಾಗೇ, ಗಡ್ಕರಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರಂತೆ ಅಮಿತ್ ಷಾ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಬಿಜೆಪಿ ಮುಖಂಡರು ಕೂಡ ಅವರ ರಾಜೀನಾಮೆಗೆ ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇವತ್ತು ಆರ್. ಎಸ್ ಸರ್ಜೆವಾಸ್ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಇದೇ ವೇಳೆ ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.
Comments