ಯೋಗೇಶ್ವರ್ ಇಲ್ಲದಿದ್ದರೂ ಪಕ್ಷವನ್ನು ತಾಲ್ಲೂಕಿನಲ್ಲಿ ಉಳಿಸಬಲ್ಲೆ : ಡಿಕೆಶಿ

ಅಕ್ಕೂರು ಜಿಪಂ ಸದಸ್ಯರಾಗಿರುವ ಗಂಗಾಧರ್ ಅವರನ್ನು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರನ್ನಾಗಿ ಅಧಿಕೃತಗೊಳಿಸಲಾಗಿದ್ದು, ಕಾಂಗ್ರೆಸ್‍ನಲ್ಲಿ ಯೋಗೇಶ್ವರ್ ಇಲ್ಲದಿದ್ದರೂ ಪಕ್ಷವನ್ನು ತಾಲ್ಲೂಕಿನಲ್ಲಿ ಉಳಿಸಬಲ್ಲೆ ಎಂಬುದನ್ನು ತೋರಿಸಿಕೊಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಶಾಸಕ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ತಾನೇ ಮೇಲೆಂದು ತಂತ್ರಗಾರಿಕೆ ಮೆರೆದರೆ, ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಸಚಿವ ಡಿ.ಕೆ.ಶಿವಕುಮಾರ್ ಪ್ರತಿತಂತ್ರ ಹೆಣೆದಿದ್ದಾರೆ. ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡಿದ್ದು, ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡಿ ಕಾಂಗ್ರೆಸ್ ಮತದಾರರನ್ನು ಕಾಂಗ್ರೆಸ್‍ನಲ್ಲಿಯೇ ಹಿಡಿದಿಡುವ ಕಾರ್ಯತಂತ್ರ ಇದಾಗಿದೆ. ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‍ನಿಂದ ದೂರಾದರೆ ಇಲ್ಲಿನ ಕಾಂಗ್ರೆಸ್‍ನವರಿಗೆ ನಮಗೆ ಯಾರೂ ಇಲ್ಲ ಎಂಬ ಕೊರಗನ್ನು ದೂರ ಮಾಡುವ ಹಿನ್ನೆಲೆಯಲ್ಲಿ ತಾಲ್ಲೂಕಿನ ವ್ಯಕ್ತಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಗಂಗಾಧರ್ ಹಿಂದುಳಿದ ವರ್ಗದವರಾಗಿರುವುದರಿಂದ ಕಾಂಗ್ರೆಸ್ ಉನ್ನತ ಹುದ್ದೆ ನೀಡಿ ಕಾಂಗ್ರೆಸ್‍ಗೆ ಹಿಂದಿನಿಂದಲೂ ಬಲವಾಗಿದ್ದ ಹಿಂದುಳಿದ ವರ್ಗದವರನ್ನು ತನ್ನಲ್ಲಿಯೇ ಉಳಿಸಿಕೊಂಡು ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜುಗೊಳಿಸಲು ಯತ್ನಿಸಲಾಗಿದೆ. ಗಂಗಾಧರ್ ಅವರ ಕ್ರಿಯಾಶೀಲತೆಯಿಂದಾಗಿ ಅಧ್ಯಕ್ಷ ಸ್ಥಾನ ದೊರಕಿದ್ದು, ಒಂದೆಡೆಯಾದರೆ ಕಾಂಗ್ರೆಸ್ ಪಕ್ಷ ಕೆಳ ಹಂತದವರನ್ನು ಮೇಲ್ಪಂಕ್ತಿಗೆ ತರುತ್ತದೆಂಬುದನ್ನು ಡಿ.ಕೆ.ಶಿವಕುಮಾರ್ ಸಹಕಾರದಿಂದ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.
Comments