ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ ಉಲ್ಟಾ ಹೊಡೆದ ವಿಧಾನಸಭಾಧ್ಯಕ್ಷ ಕೋಳಿವಾಡ

ಇದೇ 25 ಮತ್ತು 26ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆಯಾಗಿ ಜನಪ್ರತಿನಿಧಿಗಳಿಗೆ ಚಿನ್ನದ ಬಿಸ್ಕತ್, ಸಿಬ್ಬಂದಿಗೆ ಬೆಳ್ಳಿತಟ್ಟೆ ಕೊಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಸಭಾಪತಿ ಕೋಳಿವಾಡ ಮಾತು ಬದಲಿಸಿದ್ದಾರೆ.
ವಿಧಾನಸೌಧ ನಿರ್ಮಾಣದ ವಜ್ರ ಮಹೋತ್ಸವದ ವೇಳೆ ರೂ. 3 ಕೋಟಿ ಖರ್ಚು ಮಾಡಿ ಸವಿನೆನಪಿಗಾಗಿ ಶಾಸಕರು, ಸಂಸತ್ ಸದಸ್ಯರು ಮತ್ತು ವಿಧಾನಮಂಡಲ ಉಭಯ ಸಚಿವಾಲಯಗಳ ಸಿಬ್ಬಂದಿಗೆ ಉಡುಗೊರೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ಟೀಕೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಇದೇ ವೇಳೆ ವಿಧಾನಸಭಾಧ್ಯಕ್ಷ ಕೋಳಿವಾಡ ಚಿನ್ನದ ಬಿಸ್ಕತ್ತೂ ಇಲ್ಲ, ಬೆಳ್ಳಿ ತಟ್ಟೆನೂ ಇಲ್ಲ ಎಂದು ಹೇಳುವುದುರ ಮೂಲಕ ತೆರೆ ಎಳೆದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೋಳಿವಾಡ ಅವರು ಶಾಸಕರಿಗೆ ನಾವು ಚಿನ್ನದ ಬಿಸ್ಕತ್ ಕೊಡ್ತಿಲ್ಲ, ಬೆಳ್ಳಿ ತಟ್ಟೆನೂ ಕೊಡ್ತಿಲ್ಲ. ಮಾಧ್ಯಮಗಳಲ್ಲಿ ಇದು ಹೇಗೆ ವರದಿಯಾಯಿತು ಎನ್ನುವುದೂ ಗೊತ್ತಿಲ್ಲ ಎಂದು ತಿಳಿಸಿದರು.
Comments