ದೇಶದ ಅಭಿವೃದ್ಧಿ ಅಂದರೆ ಇದೇನಾ?
ಮುಂಬೈ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮುಂದೆ ಲೋಕ್ ಶಕ್ತಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕೇಂದ್ರ ಮಾಜಿ ವಿತ್ತ ಸಚಿವ ಯಶವಂತ ಸಿನ್ಹಾ ಹೇಳಿದ್ದಾರೆ.
ಮುಂಬೈ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮುಂದೆ ಲೋಕ್ ಶಕ್ತಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕೇಂದ್ರ ಮಾಜಿ ವಿತ್ತ ಸಚಿವ ಯಶವಂತ ಸಿನ್ಹಾ ಹೇಳಿದ್ದಾರೆ. ಭಾನುವಾರ ಅಕೋಲಾ ಎಂಬಲ್ಲಿ ರೈತರ ಎನ್ ಜಿಎ ಶೇತ್ ಕರಿ ಜಗರ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದವೊಂದರಲ್ಲಿ ಮಾತನಾಡಿದ ಸಿನ್ಹಾ ಅವರು ಮೋದಿ ಸರ್ಕಾರದ ಆಡಳಿತ ಬಗ್ಗೆ ಕಿಡಿಕಾರಿದ್ದಾರೆ. ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ ಅವರ ತತ್ವಗಳನ್ನು ಉಲ್ಲೇಖಿಸಿದ ಸಿನ್ಹಾ, ದೇಶದಲ್ಲಿ ಜನಶಕ್ತಿ ಮೊಳಗಬೇಕು ಎಂದಿದ್ದಾರೆ.
ಇಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಜನಶಕ್ತಿ ಆರಂಭವಾಗಬೇಕು. ನಾವು ಈಗಾಗ್ಲೇ ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದೇವೆ ಎಂದಿವೆ ಅಂಕಿ ಅಂಶಗಳನ್ನು, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಗಂಟೆಗಟ್ಟಲೆ ಮಾಡಿದ ಭಾಷಣಗಳಲ್ಲಿ ನಮ್ಮಲ್ಲಿ ಎಷ್ಟು ಕಾರುಗಳು ಎಷ್ಟು ಮೊಟಾರ್ ಸೈಕಲ್ ಗಳು ಮಾರಾಟವಾಗಿವೆ ಎಂದು ಹೇಳಿ ಇದನ್ನೇ ದೇಶದ ಅಭಿವೃದ್ಧಿ ಎಂದರೆ ಇದೇನಾ? ನಾನು ನೋಟು ರದ್ಧತಿ ಬಗ್ಗೆ ಹೇಳುವುದಿಲ್ಲ, ವಿಫಲವಾದ ಈ ಕಾರ್ಯದ ಬಗ್ಗೆ ಹೇಳುವುದಾದರೂ ಏನಿದೆ? ಎಂದು ಸಿನ್ಹಾ ಹೇಳಿದ್ದಾರೆ.
Comments