ಮೋದಿ ಆ್ಯಕ್ಷನ್ ಹಿರೋ ಎಂದ ಶತೃಘ್ನ ಸಿನ್ಹಾ
ಪಾಟ್ನಾ : ಬಿಜೆಪಿ ವಿರುದ್ಧ ಅಪಸ್ವರ ಎತ್ತುತ್ತಿರುವ ಬೆನ್ನಲ್ಲೇ ಲೋಕಸಭೆಯ ಸದಸ್, ಸಿನಿಮಾ ನಟ ಶತೃಘ್ನ ಸಿನ್ಹಾ ಅವರು ಈಗ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ. ದೇಶದ ಅತಿ ದೊಡ್ಡ ಆ್ಯಕ್ಷನ್ ಹಿರೋ ಎಂದು ಕರೆಯುವ ಮೂಲಕ ಟಾಂಗ್ ನೀಡಿದ್ದಾರೆ.
ಪಾಟ್ನಾ : ಬಿಜೆಪಿ ವಿರುದ್ಧ ಅಪಸ್ವರ ಎತ್ತುತ್ತಿರುವ ಬೆನ್ನಲ್ಲೇ ಲೋಕಸಭೆಯ ಸದಸ್, ಸಿನಿಮಾ ನಟ ಶತೃಘ್ನ ಸಿನ್ಹಾ ಅವರು ಈಗ ಪ್ರಧಾನಿ ಮೋದಿ
ಅವರನ್ನು ಹೊಗಳಿದ್ದಾರೆ. ದೇಶದ ಅತಿ ದೊಡ್ಡ ಆ್ಯಕ್ಷನ್ ಹಿರೋ ಎಂದು ಕರೆಯುವ ಮೂಲಕ ಟಾಂಗ್ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ಕನ್ನಡದ ನಟ ಪ್ರಕಾಶ್ ರೈ ಅವರು ಮೋದಿ ಒಬ್ಬ ದೊಡ್ಡ ನಟ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು. ಈಗ ಅದೇ ಧಾಟಿಯಲ್ಲಿ ಸಿನ್ಹಾ ಮಾತನಾಡಿರುವುದು ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ. ಪ್ರಧಾನಿ ಮೋದಿ ಅವರ ಬಿಹಾರದ ಕಾರ್ಯಕ್ರಮಕ್ಕೆ ಶತೃಘ್ನ ಸಿನ್ನಾ ಗೈರಾಗಿದ್ದರು. ಈಗ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಚಿಂತನೆ ನಡೆಯುತ್ತಿದೆ ಎಂಬ ಸುದ್ದಿಯೂ ಇದೆ. ಈ ಬಗ್ಗೆ ಪ್ರಶ್ನಿಸಿದಾಗ ಅಂಥದ್ದೇನು ಇಲ್ಲ ನಾನು ಯಾವತ್ತು ಭಾರತದ ಅತಿ ದೊಡ್ಡ ಆ್ಯಕ್ಷನ್ ಹೀರೋ ಆಗಿರುವ ಪ್ರಧಾನಿ ಮೋದಿ ಅವರ ಜತೆಗಿದ್ದೇನೆ. ಆದರೆ ಅವರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ತಡವಾಗಿ ನನ್ನ ಕೈಸೇರಿದೆ ಅಷ್ಟೇ ಎಂದು ಸಿನ್ಹಾ ಉತ್ತರಿಸಿದ್ದಾರೆ.
Comments