ಮೀಟರ್ ತೋರಿಸ್ತೀವಿ ಬನ್ನಿ ಜಮೀರ್ ವಿರುದ್ಧ ಗುಡುಗಿದ ಶರವಣ
ರೇವಣ್ಣ ಅವರನ್ನು ನಾನೇ ಕಾಂಗ್ರೆಸ್ ಕರೆದುಕೊಂಡು ಸೇರಿಸ್ತಿನಿ ಅಂತ ರೆಬೆಲ್ ಶಾಸಕ ಜಮೀರ್ ತುಮಕೂರಿನಲ್ಲಿ ಹೇಳಿಕೆ ನೀಡಿದ್ರು. ಇದಕ್ಕೆ ಶರವಣ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಶಾಸಕ ಟಿ ಎ ಶರವಣ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿರುದ್ಧ ತೊಡೆ ತಟ್ಟಿದ್ದಾರೆ.
ಜಮೀರ್ ಇಡೀ ಜಾತಕವೇ ಗೊತ್ತಿದೆ, ಜೆಡಿಎಸ್ ನಾಯಕರ ಮೀಟರ್ ಬಗ್ಗೆ ಮಾತನಾಡುವ ಅಶ್ಯಕತೆ ಇಲ್ಲ ಎಂದು ಶರವಣ ಗುಡುಗಿದ್ದಾರೆ. ರೆಬಲ್ ಶಾಸಕ ಜಮೀರ್ ವಿರುದ್ಧ ಹರಿಹಾಯ್ದ ಶರವಣ, ಬಿಜಿನೆಸ್ ಮಾಡಿಕೊಂಡಿದ್ದ ಜಮೀರ್, ಏನುಮಾಡಿದ್ರು ? ರಾಜಕೀಯಕ್ಕೆ ಹೇಗೆ ಬಂದ್ರು ? ಜಮೀರ್ ಬಗ್ಗೆ ಎಲ್ಲಾ ಗೊತ್ತಿದೆ ಎಂದು ಸಿಡಿಮಿಡಿಯಾದ್ರು. ತೆವಲು, ದುಡ್ಡಿನ ಮೋಹಕ್ಕಾಗಿ ಕಾಂಗ್ರೆಸ್ ಹಿಂದೆ ಬಿದ್ದ ನಿಮ್ಮನ್ನು ಪಕ್ಷ ಹೊರಗಡೆ ಹಾಕಿದೆ.. ಎಚ್ ಡಿ ರೇವಣ್ಣ ಅವರು ರಾಷ್ಟ್ರೀಯ ಪಕ್ಷಗಳಿಗೆ ಹೋಗುವುದಿಲ್ಲ. ನಿಮ್ಮ ವಿರುದ್ಧ ರೇವಣ್ಣ ನಿಲ್ಲಬೇಕಿಲ್ಲ, ನಮ್ಮಂಥ ಕಾಯ೯ಕತ೯ರು ಸಾಕು ಎಂದು ತೊಡೆತಟ್ಟಿದ್ದಾರೆ.
ನಮ್ಮ ನಾಯಕರ ಬಗ್ಗೆ ನೀವು ಮಾತನಾಡಬೇಡಿ. ಯಾರನ್ನು ಮನೆಗೆ ಕಳುಹಿಸಬೇಕು ಎಂದು ಜನರು ನಿರ್ಧರಿಸುತ್ತಾರೆ. ನಿಮ್ಮ ಇಂಥ ಹೇಳಿಕೆ ಬಯಸಿರಲಿಲ್ಲ. ತಕ್ಷಣ ಕ್ಷಮೆ ಕೇಳಬೇಕು.. ಇಲ್ಲ ಅಂದ್ರೆ ಪ್ರತಿಭಟನೆ ಮಾಡ್ತೀವಿ ಎಂದು ಶರವಣ ಎಚ್ಚರಿಕೆ ನೀಡಿದ್ದಾರೆ. ದೇವೇಗೌಡರ ಸಾವಿನ ನಂತ್ರ ಜೆಡಿಎಸ್ ಇರೋದಿಲ್ಲ. ರೇವಣ್ಣ ಅವರನ್ನು ನಾನೇ ಕಾಂಗ್ರೆಸ್ ಕರೆದುಕೊಂಡು ಸೇರಿಸ್ತಿನಿ ಅಂತ ರೆಬೆಲ್ ಶಾಸಕ ಜಮೀರ್ ತುಮಕೂರಿನಲ್ಲಿ ಹೇಳಿಕೆ ನೀಡಿದ್ರು. ಇದು ಶರವಣ ಅವರನ್ನು ಕೆರಳಿಸಿದೆ.
Comments