ಯಾರೇ ಆಗಲಿ ಆರೋಪಿಸುವ ಮುನ್ನ ಸತ್ಯಾಂಶ ತಿಳಿದಿರಬೇಕು : ಸಿದ್ದರಾಮಯ್ಯ
ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳಾಗಿದೆ. ಅವರು ನೇಣು ಹಾಕಿಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.
ಯಾರೇ ಆಗಲಿ ಆರೋಪಿಸುವ ಮುನ್ನ ಸತ್ಯಾಂಶ ತಿಳಿದು ಸೂಕ್ತ ದಾಖಲೆ ಇಟ್ಟುಕೊಂಡು ಆರೋಪಿಸಬೇಕು ಎಂದು ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ ಮೂಡಬಿದಿರೆಯಲ್ಲಿ ಪುಟ್ಟಸ್ವಾಮಿ ಅವರು ಸಿಎಂ ವಿರುದ್ಧ ಮಾಡಿದ್ದ ಆರೋಪದ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಯಾರೇ ಆಗಲಿ ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಮಾಡುವ ಸಂದರ್ಭದಲ್ಲಿ ತಾವು ಏನು ಮಾತನಾಡುತ್ತಿದ್ದೇವೆ ಎಂಬುದನ್ನು ಅರಿಯಬೇಕು. ಮಾತಿನ ಮೇಲೆ ಹಿಡಿತ ಸಾಧಿಸಬೇಕು. ವಿನಾಃಕಾರಣ ಒಬ್ಬರ ಮೇಲೆ ಆರೋಪ ಹೊರಿಸುವುದು ಶೋಭೆ ತರುವುದಿಲ್ಲ. ಆರೋಪ ಮಾಡುವ ಮುನ್ನ ಎಚ್ಚರದಿಂದಿರಬೇಕು ಎಂದರು. ತಾವು ಮಾಡುವ ಆರೋಪದಲ್ಲಿ ಸತ್ಯಾಂಶ ಇದೆಯೇ ಎಂಬುದನ್ನು ತಿಳಿದು ಮಾತನಾಡಬೇಕು. ಈಗ ನನ್ನ ವಿರುದ್ಧ ಮಾಡಿರುವ ಆರೋಪ ಹುಸಿಯಾಗಿದೆ. ಅವರು ಹೇಳಿದಂತೆ ನಡೆದುಕೊಳ್ಳುವುದು ಬೇಡ. ಅವರಿಗೆ ವಯಸ್ಸಾಗಿದೆ ಎಂದು ಹೇಳಿದರು.
Comments