ದೇವೇಗೌಡರೊಂದಿಗೆ ಅಂತ್ಯಗೊಳ್ಳಲಿರುವ ಜೆಡಿಎಸ್ : ಜಮೀರ್ ಅಹಮದ್
ಕೋಲಾರ: ಮಾಜಿ ಪ್ರಧಾನಿ ದೇವೇಗೌಡರ ನಂತರ ಜೆಡಿಎಸ್ ಪಕ್ಷ ಉಳಿಯಲ್ಲ. ಪಕ್ಷದಲ್ಲಿ ರೇವಣ್ಣ ಮತ್ತು ಅವರ ಕುಟುಂಬಕ್ಕೆ ಸರಿಯಾದ ಸ್ಥಾನಮಾನ ಇಲ್ಲ.ಆತಂಕದಲ್ಲಿ ರೇವಣ್ಣ ಮತ್ತು ಕುಟುಂಬಸ್ಥರು ಇದ್ದಾರೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆ ಪ್ರಯುಕ್ತ ಕೋಲಾರಕ್ಕೆ ಆಗಮಿಸಿರುವ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು, ಎಚ್.ಡಿ. ರೇವಣ್ಣ ಕುಮಾರಸ್ವಾಮಿಯನ್ನ ಟಾರ್ಗೆಟ್ ಮಾಡ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ.
ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಯಾರನ್ನು ಬೇಕಾದರು ನಿಲ್ಲಿಸಲಿ. ಅದಕ್ಕೆ ನಾನು ಭಯಪಡುವುದಿಲ್ಲ. ಮುಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹಲ್ಗಾಂಧಿ ಪ್ರಧಾನಿ ಆಗ್ತಾರೆ. 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಆಯ್ಕೆ ಖಚಿತ' ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಜೆಡಿಎಸ್ ವಿಲೀನವಾಗುತ್ತೆ
ದೇವೇಗೌಡರು ಜೀವಂತವಾಗಿರುವವರೆಗೂ ಜೆಡಿಎಸ್ ಇರುತ್ತೆ. ನಂತರ ಅದು ಕಾಂಗ್ರೆಸ್ಸಿಗೆ ವಿಲೀನವಾಗುತ್ತದೆ. ಎಚ್.ಡಿ.ರೇವಣ್ಣ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಸೇರಲಿದ್ದಾರೆ. ನನ್ನ ಮುಖಾಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ' ಎಂದು ತಿಳಿಸಿದರು.
Comments