ರಾಹುಲ್ ಹೇಳಿಕೆಗೆ ಸುಷ್ಮಾ ಸ್ವರಾಜ್ ತಿರುಗೇಟು

ನವದೆಹಲಿ: ಆರ್ ಎಸ್ಎಸ್ ಮಹಿಳೆಯರು ಚೆಡ್ಡಿ ಹಾಕಿಕೊಳ್ತಾರಾ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಸಚಿವೆ ಸುಷ್ಮಾ ಸ್ವರಾಜ್ ತಿರುಗೇಟು ನೀಡಿದ್ದಾರೆ. ಆರ್ ಎಸ್ ಎಸ್ ನಲ್ಲಿ ಚಡ್ಡಿ ಉಡುಗೆಯಲ್ಲಿ ಇರುವುದನ್ನು ಯಾವತ್ತಾದರೂ ನೋಡಿದ್ದೀರಾ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಗೆ ಇವತ್ತು ಸುಷ್ಮಾ ಕೂಡ ಉತ್ತರ ನೀಡಿರುವುದು ಮೂಲಗಳಿಂದ ತಿಳಿದು ಬಂದಿದೆ.

ಇಂತಹ ಹೇಳಿಕೆ ನೀಡುವುದು ಯಾವುದೇ ರಾಜಕಾರಣಿಯ ಘನತೆಗೆ ತಕ್ಕುದಲ್ಲ ಎಂದು ಮಹಿಳೆಯರೊಂದಿಗಿನ ಸಂವಾದ ಕಾರ್ಯಕ್ರಮವೊಂದರಲ್ಲಿ ಸುಷ್ಮಾ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಲಿರುವ ವ್ಯಕ್ತಿ ಈ ರೀತಿ ಪ್ರಶ್ನಿಸುವುದು ತಪ್ಪು. ಒಂದು ವೇಳೆ ಆರ್ ಎಸ್ಎಸ್ ನಲ್ಲಿ ಮಹಿಳೆಯರಿಗೆ ಆಧುನಿಕ ಉಡುಗೆ ತೊಡಲು ಅವಕಾಶ ಯಾಕೆ ಕೊಡುತ್ತಿಲ್ಲ ಎಂದು ಕೇಳಿದ್ದರೆ ನಾನು ಪ್ರತಿಕ್ರಿಯಿಸುತ್ತಿದ್ದೆ. ಆದರೆ ರಾಹುಲ್ ಬಳಸಿದ ಭಾಷೆ ಸಭ್ಯತೆ ಮೀರಿತ್ತು’ ಎಂದು ಸುಷ್ಮಾ ವಾಗ್ದಾಳಿ ನಡೆಸಿದ್ದಾರೆ.
Comments