ಗೋರಕ್ಷಣೆ ಹೆಸರಲ್ಲಿ ಹಲ್ಲೆ ತಪ್ಪು-ಗುಜುರಾತ್ ಸಿಎಂ
ಅಹಮದಾಬಾದ್ : ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ಗುಜುರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.
ಅಹಮದಾಬಾದ್ : ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ಗುಜುರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ. ನಾವು ಗೋ ರಕ್ಷಣೆ ಹೆಸರಲ್ಲಿ ನಡೆಯುವ ಹಿಂಸಾಚಾರದ ವಿರುದ್ಧವಿದ್ದು. ಹಿಂಸಾಚಾರಕ್ಕೆ ಹೊಣೆ ಯಾದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಕಾನೂನಿನ ಅಡಿಯಲ್ಲಿ ಗೋ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಗೋ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಠಿಣ ಕಾನುನೂ ಜಾರಿಗೆ ತಂದಿದ್ದೇವೆ ಎಂದು ರೂಪಾನಿ ಹೇಳಿದ್ದಾರೆ.
ದಲಿತರ ಮನೆಗೆ ದಾಳಿ ನಡೆಸುವುದು ತಪ್ಪು ಎಂದಿರುವ ರೂಪಾನಿ, ದಲಿತರ ರಕ್ಷಣೆ ನಮ್ಮ ಹೊಣೆಯಾಗಿದೆ. ಗುಜುರಾತ್ ನಲ್ಲಿ ದಲಿತರ ಕಲ್ಯಾಣ ಹಾಗೂಸುರಕ್ಷತೆಯ ಭರವಸೆ ನೀಡಿದ್ದೇವೆ, ಹೀಗಾಗಿ ದಲಿತರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.
Comments