ಬಿಜೆಪಿಯ ಮಾಜಿ ಮುಖ್ಯಮಂತ್ರಿ ಮತ್ತು ಸಂಸದರ ವಿರುದ್ದ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ

ಸಚಿವ ರೋಷನ್ ಬೇಗನ್ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವ ವಿನಯ ಕುಲಕರ್ಣಿ ಕೂಡ ಧಾರವಾಡದಲ್ಲಿ ಬಾಯಿ ಹರಿ ಬಿಟ್ಟಿದ್ದಾರೆ....
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗು ಸಂಸದ ಪ್ರಹಲ್ಲಾದ್ ಜೋಷಿ ,ಹುಬಳ್ಳಿ ಧಾರವಾಡದ ಎರಡು ಗೊಡ್ಡು ಎಮ್ಮೆಗಳು ಅಂತ ನಿಂದಿಸಿದರು. ಇವು ಕರುವು ಹಾಕೋದಿಲ್ಲ ಹಾಲು ಕೊಡೋದಿಲ್ಲ. ಈ ಭಾಗದಲ್ಲಿ ಇವು ವೆಸ್ಟ್ , ಸುಳ್ಳಿನ ಸರದಾರರಾದ ಇವರಿಂದ ಯಾವುದೇ ಫಲವಿಲ್ಲ ಅಂತ ಹೇಳಿದ್ದಾರೆ. ಮುಖ್ಯ ಮಂತ್ರಿಯಾಗಿ ಈ ಭಾಗಕ್ಕೆ ಶೆಟ್ಟರ್ ಕೊಡುಗೆ ಏನು ? ಇಷ್ಟು ದಿನ ಮಲಗಿಕೊಂಡಿದ್ದ ಇವರು ಚುನಾವಣೆ ಅತ್ತಿರ ಬರುತ್ತಿದ್ದಂತೆ ಪಾಲಿಕೆಯ ನೌಕರರ ಪಿಂಚೂಣಿ ಹಣಕ್ಕೆ ನನ್ನ ಮನೆಯ ಬಾಗಿಲಿಗೆ ಪಾದಯಾತ್ರೆ ಕೈ ಕೊಂಡಿದ್ದಾರೆ ಎಂದು ಆರೋಪಿಸಿದರು. ಇವತ್ತು ನಾವು ಹೋರಾಟ ಮಾಡುತ್ತಿದ್ದೇವೆ. ಮುಂದೇನು ಮುಂದುವರೆಸುತ್ತೇವೆ. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
Comments