ಜಿ ಟಿ ದೇವೇಗೌಡ , ಎಚ್ ವಿಶ್ವನಾಥ್ ವಿರುದ್ಧ ಸಂದೇಶ್ ನಾಗರಾಜ್ ಗರಂ

ಪ್ರಜ್ವಲ್ ರೇವಣ್ಣರವರಿಗೆ ಶಾಸಕ ಜಿ ಟಿ ದೇವೇಗೌಡ ಬುದ್ದಿವಾದ ಹೇಳಿದ್ದಾರೆ.ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಡೆ ನಾಗರಾಜ್ ಫುಲ್ ಗರಂ ಆಗಿದ್ದ್ದಾರೆ. ಜಿ ಟಿ ದೇವೇಗೌಡ , ಎಚ್ ವಿಶ್ವನಾಥ್ ವಿರುದ್ಧ ಸಂದೇಶ್ ನಾಗರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಜ್ವಲ್ ತಪ್ಪುಮಾಡಿದ್ರೆ ಎಚ್ ಡಿ ದೇವೇಗೌಡರು ಬುದ್ದಿ ಹೇಳುತ್ತಾರೆ. ಈ ಬಗ್ಗೆ ಇವರಿಬ್ಬರಿಗೆ ಯಾವುದೇ ಹಕ್ಕಿಲ್ಲ ಅಂತ ಸಂದೇಶ್ ನಾಗರಾಜ್ ನಾಗರಾಜ್ ಕೆಂಡ ಮಂಡಲರಾಗಿದ್ದರೆ. ಪ್ರಜ್ವಲ್ ರೇವಣ್ಣ ನವರು ತಪ್ಪು ಮಾಡಿದಾಗ ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣನವರು ಬುದ್ದಿ ಹೇಳಿದ್ದಾರೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವುದು ಸರಿಯಿಲ್ಲ. ಅಷ್ಟೇ ಅಲ್ಲದೆ ಪ್ರಜ್ವಲ್ ರೇವಣ್ಣ ರವರಿಗೆ ಹುಣಸೂರಿನಲ್ಲಿ ಸೀಟು ಕೊಡಲಿಲ್ಲದಕ್ಕೆ ಅವರಿಗೆ ನಿರಾಸೆಯಾಗಿ ಈ ರೀತಿ ಮಾತನಾಡಿದ್ದಾರೆ. ಈ ರೀತಿಯಾಗಿ ಮಾತನಾಡಿರುವುದರಿಂದ ನಮ್ಮ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಸಂದೇಶ್ ನಾಗರಾಜ್ ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಿ ಟಿ ದೇವೇಗೌಡರು ನಾನು ಈ ರೀತಿ ಮಾತನಾಡಿಲ್ಲ ಎಂದು ಹೇಳಿದರು. ಅದಕ್ಕೆ ಸಂದೇಶ್ ನಾಗರಾಜ್ ರವರು ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Comments