ಚುನಾವಣಾ ಪ್ರಚಾರದಲ್ಲಿ ದೇವೇಗೌಡರ ಇಬ್ಬರು ಮೊಮ್ಮಕ್ಕಳು ಭಾಗಿ

ಹಾಸನದಲ್ಲಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಈಗಾಗಲೇ ರಾಜಕೀಯದಲ್ಲಿದ್ದು, ಕುಮಾರ ಸ್ವಾಮಿ ಪುತ್ರ ನಿಖಿಲ್ ನಟನಾಗಿದ್ದಾರೆ. ನಿಖಿಲ್ ತಮ್ಮ ತಂದೆಯ ಜೊತೆ ಸೇರಿ ಪಕ್ಷವನ್ನು ಬಲಪಡಿಸಲು ಚುನಾವಣಾ ಪ್ರಚಾರಗದಲ್ಲಿ ಭಾಗಿಯಾಗುತ್ತಿದ್ದಾರೆ, ಅದಕ್ಕೆ ನಾನು ಏಕೆ ಬೇಡ ಎಂದು ಹೇಳಬೇಕುಎಂದು ದೇವೇಗೌಡರು ಪ್ರಶ್ನಿಸಿದರು .
ನನ್ನ ಇಬ್ಬರು ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಇಬ್ಬರು ಕೂಡ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಳ್ಳುತ್ತಾರೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ ಹೇಳಿದ್ದಾರೆ. ಹಾಸನದಲ್ಲಿ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಈಗಾಗಲೇ ರಾಜಕೀಯದಲ್ಲಿದ್ದು, ಕುಮಾರ ಸ್ವಾಮಿ ಪುತ್ರ ನಿಖಿಲ್ ನಟನಾಗಿದ್ದಾರೆ. ನಿಖಿಲ್ ತಮ್ಮ ತಂದೆಯ ಜೊತೆ ಸೇರಿ ಪಕ್ಷವನ್ನು ಬಲಪಡಿಸಲು ಚುನಾವಣಾ ಪ್ರಚಾರಗದಲ್ಲಿ ಭಾಗಿಯಾಗುತ್ತಿದ್ದಾರೆ, ಅದಕ್ಕೆ ನಾನು ಏಕೆ ಬೇಡ ಎಂದು ಹೇಳಬೇಕು, ಆತನ ಸಿನಿಮಾ ಚರಿಸ್ಮಾವನ್ನು ಬಳಸಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳ ವಿಶ್ರಾಂತಿ ನಂತರ ತಮ್ಮ ಪುತ್ರ ಕುಮಾರ ಸ್ವಾಮಿ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂಬ ಭರವಸೆ ನೀಡಿದ ಅವರು ಪ್ರಜ್ವಲ್ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರು. ಮೊದಲಿಗೆ ಪ್ರಜ್ವಲ್ ಬೇಲೂರಿನಿಂದ, ನಂತರ ಹುಣಸೂರಿನಿಂದ, ಈಗ ರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸಲಿದ್ದಾರೆ ಎಂಗು ನೀವೇ ಹೇಳುತ್ತಿದ್ದೀರಿ ಎಂದರು, ಇದುವರೆಗೂ, ನಾನು ಸ್ಪರ್ಧಿಸುತ್ತೇನೆ ಎಂದು ನನ್ನನ್ನು ಕೇಳಿಲ್ಲ, ಪ್ರಜ್ವಲ್ ಸ್ಪರ್ಧೆ ವಿಚಾರವಾಗಿ ಅಂತಿಮ ನಿರ್ಧಾರ ಕೈಗಳ್ಳುವುದು ನಾನೇ ಎಂಬುದಾಗಿ ತಿಳಿಸಿದ್ದಾರೆ. ಇನ್ನೂ ಯಾವುದೇ ಪಕ್ಷದೊಂದಿಗೆ ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Comments