ಹೆಣ್ಣು ದೆವ್ವದ ಕಾಟ.. ಊರು ಬಿಡುತ್ತಿರುವ ಜನರು

ಪುರುಷರೆಲ್ಲರು ಹೆಣ್ಣು ದೆವ್ವ ಕಾಡುತ್ತದೆ ಎಂಬ ಭೀತಿಯಲ್ಲಿ ಹೈರಾಣಾಗಿದ್ದಾರೆ. ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಸಿಗುಡ ಗ್ರಾಮದಲ್ಲಿ ನಡೆದಿರುವ ಘಟನೆ ಇದು. ಅಲ್ಲಿ ಕುಟುಂಬಗಳು ಊರೇ ಬಿಟ್ಟು ಹೋಗುತ್ತಿವೆ.
ನಿರ್ಮಲ್ : ದೆವ್ವ -ಭೂತಗಳ ಇರುವಿಕೆಯನ್ನು ಕೆಲವರು ನಂಬಿದ್ರೆ, ಮತ್ತೆ ಕೆಲವರು ನಂಬುವುದಿಲ್ಲ, ಅವೆಲ್ಲ ಸುಳ್ಳು ಎಂದು ಹೇಳುವರಿದ್ದಾರೆ. ಆದ್ರೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಹೆಣ್ಣು ದೆವ್ವವಿದೆ ಎಂಬ ಕಾರಣಕ್ಕೆಊರಿನ ಜನ ಹೆದರಿ ಇಡೀ ಊರೇ ಬಿಟ್ಟಿರುವುದು ವರದಿಯಾಗಿದೆ.
ಪುರುಷರೆಲ್ಲರು ಹೆಣ್ಣು ದೆವ್ವ ಕಾಡುತ್ತದೆ ಎಂಬ ಭೀತಿಯಲ್ಲಿ ಹೈರಾಣಾಗಿದ್ದಾರೆ. ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಸಿಗುಡ ಗ್ರಾಮದಲ್ಲಿ ನಡೆದಿರುವ ಘಟನೆ ಇದು. ಅಲ್ಲಿ ಕುಟುಂಬಗಳು ಊರೇ ಬಿಟ್ಟು ಹೋಗುತ್ತಿವೆ. ಇನ್ನು ಊರಲ್ಲಿ ಹೆಣ್ಮಕ್ಕಳು ವಾಸಿಸಲು ದೈರ್ಯ ತೋರುತ್ತಿಲ್ಲ, ಇನ್ನು ಪುರುಷರು ಊರಲ್ಲಿ ಸಂಜೆಯ ಹೊತ್ತು ಮನೆ ಸೇರಿದ್ರೆ, ಮತ್ತೆ ಹೊರ ಬರುವುದು ಮರುದಿನ ಬೆಳಿಗ್ಗೆ.
ಗ್ರಾಮದ ಸಮೀಪ ಕಲ್ಲು ಕ್ಯಾರಿ ಇದ್ದು ಹೆಚ್ಚಿನವರು ಅಲ್ಲಿಗೆ ಕೆಲಸಕ್ಕೆ ಹೋಗುತ್ತಾರೆ. ಒಂದು ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಈ ಗ್ರಾಮ ಇದೀಗ ಮರಗಳೆನ್ನೆಲ್ಲಾ ಕಳೆದುಕೊಂಡಿದೆ.
Comments