ಸಿಎಂ ಸಿದ್ದರಾಮಯ್ಯರನ್ನು ಮಣಿಸಲು ಪ್ರತಿಪಕ್ಷಗಳ ಸರ್ಕಸ್
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರವರನ್ನು ಮಣಿಸಲು ಬಿಜೆಪಿ , ಜೆಡಿಎಸ್ ನಾಯಕರು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಹೀಗಾಗಿ ಇವತ್ತು ಬಿಜೆಪಿ ನಾಯಕ ಶ್ರೀನಿವಾಸ್ ಪ್ರಸಾದ್ ರವರನ್ನು ಮಾಜಿ ಸಂಸದ ಎಚ್. ವಿಶ್ವನಾಥ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಎಚ್. ವಿಶ್ವ ನಾಥ್, ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರದ್ದು ದುರ್ಯೋಧನ ನೀತಿ , ನಾನು ನಾನು ನನ್ನನ್ನ ಬಿಟ್ಟರೆ ಯಾರಿದ್ದಾರೆ ? ಅನ್ನುವ ದುರಹಂಕಾರಿ ಸಿಎಂ ಎಂದು ಕಿಡಿಕಾರಿದರು. ಅಲ್ಲದೆ ಮೈಸೂರಿನಲ್ಲಿ ನಾವಿದ್ದೇವೆ ಅನ್ನೋದು ಸಿಎಂಗೆ ಅರ್ಥ ಆಗಬೇಕಿದೆ. ಅದಕ್ಕಾಗಿ ನಾವು ಶ್ರೀನಿವಾಸ್ ಪ್ರಸಾದ್ ರವರನ್ನು ಭೇಟಿ ಮಾಡಿದ್ದೇವೆ ಅಂತ ಹೇಳಿದರು. ಹಾಗೇನೆ ಮೈಸೂರು ಭಾಗದ ರಾಜಕಾರಣ ಶುದ್ದೀಕರಣ ಆಗಬೇಕಿದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮಾಡುತ್ತಿದ್ದೇವೆ ಎಂದು ಹೇಳಿದರು.
Comments