ಹಾಸನಾಂಬೆಯ ದರ್ಶನ ಪಡೆದ ದೇವೇಗೌಡರ ಕುಟುಂಬ

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ಕ್ಷೇತ್ರದ ಬಾಗಿಲು ತೆರೆದಿದ್ದು, ಗಣ್ಯರೂ ಸೇರಿದಂತೆ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇಂದು ಜೆಡಿಎಸ್ ವರಿಷ್ಠ ದೇವೇಗೌಡ ತಮ್ಮ ಪುತ್ರ, ಮೊಮ್ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ
ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಪ್ರಸಿದ್ಧ ಹಾಸನಾಂಬೆ ಕ್ಷೇತ್ರದ ಬಾಗಿಲು ತೆರೆದಿದ್ದು, ಗಣ್ಯರೂ ಸೇರಿದಂತೆ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇಂದು ಜೆಡಿಎಸ್ ವರಿಷ್ಠ ದೇವೇಗೌಡ ತಮ್ಮ ಪುತ್ರ, ಮೊಮ್ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಗುರುವಾರ ಭಕ್ತರಿಗಾಗಿ ದೇಗುಲದ ಬಾಗಿಲು ತೆರೆಯಲಾಗಿತ್ತು.ಒಟ್ಟು ಒಂಭತ್ತು ದಿನಗಳ ಕಾಲ ದೇವರ ದರ್ಶನ ಮಾಡಬಹುದಾಗಿದೆ. ದಿನದ 24 ಗಂಟೆಯೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್ 21 ಕ್ಕೆ ಮರಳಿ ಬಾಗಿಲು ಮುಚ್ಚಲಾಗುತ್ತದೆ.
Comments