ಪಾಟ್ನಾ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ನಿತೀಶ್, ಪ್ರಧಾನಿ ಮೋದಿ, ಲಾಲು ಮುಖಾಮುಖಿ
ನವದೆಹಲಿ: ರಾಜಕಾರಣದಲ್ಲಿ ಇಂಥ ಸಂದರ್ಭಗಳು ಕಡಿಮೆ ನೋಡಲು ಸೀಗುತ್ತವೆ. ಅಕ್ಟೋಂಬರ್ 14ರಂದು ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಶತಾಬ್ಧಿ ಸಮಾರಂಭಹಮ್ಮಿಕೊಳ್ಳಲಾಗಿದೆ.
ನವದೆಹಲಿ: ರಾಜಕಾರಣದಲ್ಲಿ ಇಂಥ ಸಂದರ್ಭಗಳು ಕಡಿಮೆ ನೋಡಲು ಸೀಗುತ್ತವೆ. ಅಕ್ಟೋಂಬರ್ 14ರಂದು ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಶತಾಬ್ಧಿ ಸಮಾರಂಭಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಗಣ್ಯ ಅತಿಥಿಗಳಾಗಿ ಪ್ರಧಾನಮಂತ್ರಿ ಮೋದಿ, ನಿತೀಶ್ ಕುಮಾರ್ ಯಾದವ್ ಹಾಗೂ ಲಾಲು ಪ್ರಸಾದ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
ಸಮಾರಂಭದಲ್ಲಿ ವಿಶೇಷವಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಆಗಮಿಸಲಿದ್ದಾರೆ. ಪಾಟ್ನಾ ವಿಶ್ವವಿದ್ಯಾಲಯದಲ್ಲಿಯೇ ಅಭ್ಯಾಸ ಮಾಡಿರುವ ನಿತೀಶ್ ಕುಮಾರ್ ಭಾಗಿಯಾಗಲಿದ್ದು, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೊ ಕೂಡ ಆಮಂತ್ರಣ ನೀಡಲಾಗಿದೆ. ಒಬ್ಬರನೊಬ್ಬರು ವಾಗ್ದಾಳಿ ನಡೆಸುತ್ತಿದ್ದ ಮೂವರು ನಾಯಕರು ಮತ್ತೆ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಖ್ಯವಾಗಿ ಈ ಸಮಾರಂಭದಲ್ಲಿ ಎಲ್ಲರ ದೃಷ್ಟಿ ಪ್ರಧಾನಿ ನರೇಂದ್ರ ಮೋದಿ ಮೇಲೆ ನೆಟ್ಟಿದೆ. ಪಾಟ್ನಾ ಶತಾಬ್ದಿ ವಿಶ್ವವಿದ್ಯಾಲಯ ಸಮಾರಂಭದಲ್ಲಿ ನಿತೀಶ್ ಕುಮಾರ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ವಜನಿಕ ವೇದಿಕೆಯಲ್ಲಿ ಮೊದಲ ಬಾರಿಗೆ ಕಾಣಿಸಲಿದ್ದಾರೆ.
Comments