ಯುವ ಸಮುದಾಯಕ್ಕೆ ಎಚ್ಚರಿಕೆಯಿಂದ ಇರಲು ಗೌಡರ ಸಲಹೆ

ಇಂದಿರಾಗಾಂಧಿಯಂತೆ ಪ್ರಧಾನಿ ಮೋದಿ ಕೂಡ ಸರ್ವಾಧಿಕಾರಿ ಧೋರಣೆ ಹಾದಿಯಲ್ಲಿ ಸಾಗುತ್ತಿದ್ದಾರೆ. ಮುಂದೆ ರಾಜಕೀಯ ತುರ್ತು ಪರಿಸ್ಥಿತಿ ಸಾಧ್ಯತೆಗಳಿದ್ದು, ಯುವ ಸಮುದಾಯ…..
ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಜೆಪಿ ಅವರ ಒಡನಾಡಿ ನಾರಾಯಣ್ ಪ್ರಸಾದ್ ಅಗರ್‍ವಾಲ್ ಮಾತನಾಡಿ, ದೇವೇಗೌಡರು ಭ್ರಷ್ಟಾಚಾರ ರಹಿತ ರಾಜಕಾರಣಿ 1946ರಲ್ಲಿ ಜೆಪಿ ಆಂದೋಲನದಲ್ಲಿ ಪಾಲ್ಗೊಂಡಿದ್ದ ನಾವು ಸೆರೆ ವಾಸ ಅನುಭವಿಸಿದ್ದೆವು ಎಂದ ಅವರು, ಯಾವುದೇ ಹಗರಣದಲ್ಲಿ ಪಾಲ್ಗೊಳ್ಳದಿದ್ದರು ದೇವೇಗೌಡರು ಪ್ರಧಾನಿ ಹುದ್ದೆ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದರು.
ದೇಶಕ್ಕೆ 2ನೇ ಸ್ವಾತಂತ್ರ್ಯ ತಂದುಕೊಟ್ಟ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ಬಿಜೆಪಿ ಮರೆತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. , ಜನತಾ ಸರ್ಕಾರ ಇದ್ದಾಗಲೂ ಆ ಸರ್ಕಾರ ಹೋದ ನಂತರವೂ ಅದಕ್ಕೂ ಮೊದಲಿನಿಂದಲೂ ಜೆಪಿ ಜನ್ಮ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಕಾಂಗ್ರೆಸ್ ಆಚರಿಸಲು ಸಾಧ್ಯವಿಲ್ಲ. ಆದರೆ ಜೆಪಿ ಆಂದೋಲನದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅಂತಹವರೂ ಜೆಪಿ ಸ್ಮರಣೆ ಮರೆತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
Comments