ಕಾಂಗ್ರೆಸ್ ನ ಕೊಳಕು ತಂತ್ರಗಳು ಕೆಲಸಮಾಡುವುದಿಲ್ಲ
ಬಿಜೆಪಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಒಗ್ಗಟ್ಟಾಗಿ ಮಿಷನ್ 150 ಯಶಸ್ಸಿಗಾಗಿ ಕೆಲಸ ಮಾಡುತ್ತಿದೆ. ನಕಾರಾತ್ಮಕ ಸುದ್ದಿಗಳನ್ನು ನೆಡುವ ಕಾಂಗ್ರೆಸ್ ನ ಕೊಳಕು ತಂತ್ರಗಳು ಕೆಲಸಮಾಡುವುದಿಲ್ಲ ಎಂದು ಬರೆದಿದ್ದಾರೆ. ನೀವು ಎಲ್ಲಿ ಏನೇ ನಡುವ ಕೆಲಸ ಮಾಡಿ, ಆದರೆ ವಿಶ್ವದಲ್ಲೇ ಕಡು ಭ್ರಷ್ಟ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಒಗ್ಗಟ್ಟಾಗಿದೆ ಎಂದು ಇನ್ನೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಪರಿವರ್ತನಾ ರ‍್ಯಾಲಿ ವಿಚಾರದಲ್ಲಿ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ ಎಂಬ ಸುದ್ದಿಯ ಬೆನ್ನಲ್ಲೇ ಸಂಸದೆ ಶೋಭಾ ಕರಂದ್ಲಾಜೆ ಗುರುವಾರ ಸರಣಿ ಟ್ವೀಟ್ ಗಳನ್ನು ಮಾಡಿ ತೇಪೆ ಹಚ್ಚಿದ್ದು, ಬಿಜೆಪಿ ಒಗ್ಗಟ್ಟಾಗಿದ್ದು,ಮಿಷನ್ 150 ಗಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಆರ್ .ಅಶೋಕ್ ಮತ್ತು ನಾನು ಜೊತೆಯಾಗಿ ಪಕ್ಷಕ್ಕೆ ಕೆಲಸ ಮಾಡುತ್ತಿದ್ದು, ಬಿಜೆಪಿ ವಿರೋಧಿಗಳು ನಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ನಮ್ಮ ವಿರೋಧಿಗಳಲ್ಲಿ ನಂಬಿಕೆ ಇಡಬೇಡಿ ಎಂದು ಕಾರ್ಯಕರ್ತರಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಕೆಲ ಬಿಜೆಪಿ ವಿರೋಧಿಗಳು ಮಾಧ್ಯಮಗಳಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದಾರೆ. ನಾನು ಬಿಎಸ್ವೈ ಸರ್ ಬಳಿ ಶಿವಣ್ಣ , ರವೀಂದ್ರನಾಥ್ ಅವರನ್ನು ಸಂಪ್ರದಾಯಿಕ ಪ್ರಚಾರ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕೆಂದು ಕೇಳಿಕೊಂಡಿದ್ದೆ ಎಂದು ಟ್ವೀಟ್ ಮಾಡಿದ್ದಾರೆ .
Comments