ದೇಶಕ್ಕೆ ಮಾತನಾಡುವವರು ಬೇಡ. ಕೆಲಸ ಮಾಡುವ ಪ್ರಧಾನಿ ಬೇಕು- ಮಾಯಾವತಿ

ನವದೆಹಲಿ: ಬಹುಜನ ಸಮಾಜವಾದಿ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ದೇಶಕ್ಕೆ ಮಾತನಾಡುವವರು ಬೇಕಾಗಿಲ್ಲ, ಕೆಲಸ ಮಾಡಿ ತೋರಿಸುವವರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಬಹುಜನ ಸಮಾಜವಾದಿ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ದೇಶಕ್ಕೆ ಮಾತನಾಡುವವರು ಬೇಕಾಗಿಲ್ಲ, ಕೆಲಸ ಮಾಡಿ ತೋರಿಸುವವರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ವಸ್ತುಗಳ ದುಬಾರಿ, ಬಡತನ, ಉದ್ಯೋಗ ಇವೆಲ್ಲವುಗಳ ನಿವಾರಿಸಬೇಕು ಎಂದ್ರೆ ಕೆಲಸ ಮಾಡುವ ಪ್ರದಾನಿ ಬೇಕಾಗುತ್ತದೆ ಎಂದರು.
ಉತ್ತರಪ್ರದೇಶ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಅವರು. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ದೇಶದ ಪ್ರಧಾನಿಯೊಬ್ಬರು ತಮ್ಮ ಮಾತಿನಲ್ಲಿಯೇ ನಂಬಿಕೆ ಇರಿಸಿದ್ದಾರೆ. ಇದಕ್ಕಾಗಿ ಸರ್ಕಾರಿ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ. ಪ್ರತಿಪಕ್ಷ ಧ್ವನಿಯನ್ನು ನಿಗ್ರಹಿಸಲು ಒಂದು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
Comments