ರಾಹುಲ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರಾ ಮೋದಿ!

ಜನಸಾಮಾನ್ಯರೆದುರು ರಾಹುಲ್ ಗಾಂಧಿ ಆಡುತ್ತಿದ್ದ ಮಾತುಗಳಲ್ಲಿ ಕಂಡುಬರುತ್ತಿರಲಿಲ್ಲ. ಈ ವಿಚಾರದಲ್ಲಿ ಅವರಿನ್ನೂ ಪ್ರಧಾನಿ ಮೋದಿಗಿಂತ ಬಹಳ ಹಿಂದಿದ್ದಾರೆ. ಆದರೀಗ ಅವರ ಮಾತುಗಳನ್ನು ಗಮನಿಸಿದರೆ ಲಯಕ್ಕೆ ಮರಳಿರುವಂತೆ ಕಂಡುಬರುತ್ತಿದೆ. ಅವರ ಮಾತುಗಳಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಂದು ರೀತಿಯ ಹುರುಪು ಕಂಡು ಬರುತ್ತಿದೆ.
ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಪೂರ್ಣವಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬದಲಾಗಿರುವ ಅವರ ವ್ಯಕ್ತಿತ್ವ ಅಚ್ಚರಿ ಮೂಡಿಸುವಂತಿದೆ. ಅವರ ಸ್ಥಾನದಲ್ಲಿರುವ ರಾಜಕಾರಣಿಯೊಬ್ಬರು ಮಾತನಾಡುವಂತಹ ಪ್ರಬುದ್ಧತೆ, ಸಮಾವೇಶಗಳಲ್ಲಿ ಜನಸಾಮಾನ್ಯರೆದುರು ರಾಹುಲ್ ಗಾಂಧಿ ಆಡುತ್ತಿದ್ದ ಮಾತುಗಳಲ್ಲಿ ಕಂಡುಬರುತ್ತಿರಲಿಲ್ಲ. ಈವರೆಗೂ ಅವರ ಮಾತುಗಳು ನಗೆಪಾಟಲಿಗೀಡಾಗುತ್ತಿದ್ದವು. ಆದರೀಗ ರಾಹುಲ್ ತನ್ನ ಈ ದೌರ್ಬಲ್ಯವನ್ನೇ ಅಸ್ತ್ರವಾಗಿರಿಸಿಕೊಂಡಿರುವುದನ್ನು ಗಮನಿಸಬಹುದು.ಗುಜರಾತ್'ನಲ್ಲಿನ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ 2014ರ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ನನಗೆ ಬಹಳಷ್ಟು ಕಲಿಸಿದೆ, ನನ್ನ ಕಣ್ತೆರೆಸಿದೆ. ಅವರೆಷ್ಟೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸೋಣ ಎಂದು ಹೇಳಬಹುದು, ಆದರೆ ನಾನ್ಯಾವತ್ತೂ ಬಿಜೆಪಿ ಮುಕ್ತ ಭಾರತ ಎಂದು ಹೇಳುವುದಿಲ್ಲ. ಯಾಕೆಂದರೆ ಅವರು ನನಗೆ ಬಹಳಷ್ಟು ಕಲಿಸಿದ್ದಾರೆ'ಎಂದಿದ್ದಾರೆ.ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪುತ್ರನ ಮಾಲಿಕತ್ವದ ಕಂಪೆನಿಯಲ್ಲಿ ಭಾರೀ ಪ್ರಮಾಣದ ಏರಿಕೆ ವಿಚಾರವಾಗಿ ಮಾತನಾಡಿದ ರಾಹುಲ್ ಗಾಂಧಿ, ಸರ್ಕಾರ ಈಗಾಗಲೇ 'ಬೇಟಿ ಬಚಾವೋ' ನಿಂದ ಮುಂದುವರೆದು 'ಬೇಟಾ ಬಚಾವೋ' ಎಂದು ಬದಲಾಗಿದೆ.
ಕಾವಲುಗಾರ ಎಲ್ಲಿದ್ದಾನೆ? ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ!
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪುತ್ರನ ಮಾಲಿಕತ್ವದ ಕಂಪೆನಿಯ ಟರ್ನ್'ಓವರ್ ವಿಚಾರದಲ್ಲಿ ಪ್ರಧಾನಿ ಮೋದಿಯನ್ನೇ ಗುರಿಯಾಗಿಸಿಕೊಂಡು ಮಾತನಾಡಿದ ರಾಹುಲ್ ಗಾಂಧಿ 'ಕಾವಲುಗಾರ'ನೆಲ್ಲಿ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಈ ಪ್ರಶ್ನೆಗಳಿಗೆ ಸುದ್ದಿಗೋಷ್ಠಿ ಹಾಗೂ ಜನ ಸಮಾವೇಶದ ಮೂಲಕ ಬಿಜೆಪಿ ಉತ್ತರಿಸಿದೆಯಾದರೂ, ಖುದ್ದು ಪ್ರಧಾನಿ ಮೋದಿ ಯಾವ ರೀತಿ ಉತ್ತರಿಸುತ್ತಾರೆಂಬ ಕುತೂಹಲ ಮೂಡಿದೆ. ಪ್ರಧಾನಿ ನೀಡುವ ಉತ್ತರದ ಬಳಿಕ ಈಗಾಗಲೇ ಬದಲಾಗಿರುವ ರಾಹುಲ್ ಗಾಂಧಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ.
Comments