ಕಾಂಗ್ರೆಸ್ ಶಾಸಕರಿಂದ ಐಎಎಸ್ ಅಧಿಕಾರಿಗೆ ಬೆದರಿಕೆ
ಗ್ರಾನೈಟ್ ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಅಂತ ಐಎಎಸ್ ಅಧಿಕಾರಿಗೆ ಶಾಸಕರು ಬೆದರಿಕೆ ಹಾಕಿದ್ದಾರಂತೆ. MLA ಶಿವಕುಮಾರ್ ನಾಯಕ್ ಪುತ್ರ ಸೂರಜ್ ನಾಯಕ್ ಮಾಲಿಕತ್ವದ ಗ್ರಾನೈಟ್ ಫ್ಯಾಕ್ಟರಿಗೆ ಶಾಸಕರು ಅನುಮತಿ ಕೇಳಿದ್ದಾರೆ. ಆದರೆ ನಿಯಮದ ಪ್ರಕಾರ ಅರ್ಜಿ ಪರಿಗಣನೆಗೆ ಅನರ್ಹ ಎಂದಿದ್ದ ಐಎಎಸ್ ಅಧಿಕಾರಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಲಾಗಿದೆ ಅಂತ ಆರೋಪಿಸಲಾಗಿದೆ.
ದಾವಣಗೆರೆಯ ಮಾಯಕೊಂಡ ಕಾಂಗ್ರೆಸ್ ಶಾಸಕ ಶಿವಕುಮಾರ್ ನಾಯಕ್ ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಠಾರಿಯಾ ಗೆ ಬೆದರಿಕೆಯನ್ನು ಹಾಕಿದ್ದಾರೆ, ಅಂತ ಹೇಳಿ ರಾಜೇಂದ್ರ ಕುಮಾರ್ ಕಠಾರಿಯಾ ಇದೀಗ ದೂರನ್ನು ಕೊಟ್ಟಿದ್ದಾರೆ. ಸಿಎಂ ಹಾಗು ಸಿಎಂ ಪ್ರಧಾನ ಕಾರ್ಯದರ್ಶಿಗೆ ದೂರನ್ನು ಕೊಟ್ಟಿದ್ದಾರೆ. ಶಾಸಕರ ಮಗನ ಗ್ರಾನೈಟ್ ಫ್ಯಾಕ್ಟರಿಗೆ ಅನುಮತಿ ನೀಡಿಲ್ಲವೆಂದು ಆರೋಪವನ್ನು ಮಾಡಿದ್ದಾರೆ. ಶಾಸಕ ಶಿವಕುಮಾರ್ ನಾಯಕ್ ಮೂರೂ ದಿನಗಳಿಂದ ಹೊರಗೆ ಬರುತ್ತಿಲ್ಲ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಬಗ್ಗೆ ತುಟಿಕ್- ಪಿಟಿಕ್ ಅಂತಿಲ್ಲ . ಇದೇ ವಿಚಾರಕ್ಕೆ ಟಿ ಬಿ ಜಯಚಂದ್ರ ಪ್ರತಿಕ್ರಿಯಿಸಿ, ಶಾಸಕರು ಒಂದು ಜವಾಬ್ದಾರಿ ಸ್ಥಾನದಲ್ಲಿ ಇರತಕ್ಕಂತವರು ಯಾವುದೇ ಕಾರ್ಯವನ್ನು ನಿರ್ವಹಿಸಬೇಕಾದರೆ ಇತಿಮಿತಿ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಅಷ್ಟೇ ಪ್ರಮಾಣದಲ್ಲಿ ಅಧಿಕಾರಿಗಳಿಗೂ ಕೂಡ ಯಾವುದೇ ವಿಳಂಬ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಜನಪ್ರತಿನಿಧಿಗಳು ಕೋಪ ಆವೇಶಕ್ಕೆ ಒಳಗಾಗಬಾರದು. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಕಾರ್ಯಾಂಗ, ಶಾಸಕಾಂಗ ಜೊತೆ ಜೊತೆಗೆ ಹೋಗಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
Comments