ಸಾಮಾಜಿಕ ಮಾಧ್ಯಮದಲ್ಲಿ 'ರಮ್ಯಾ' ಅವರಿಂದಲೇ ಟ್ರೆಂಡ್ ಆಗ್ತಿದ್ದಾರೆ ರಾಹುಲ್ ಗಾಂಧಿ
ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರೀಯಗೊಳಿಸುವಲ್ಲಿ ಬ್ಯುಸಿ ಇರುವ ರಮ್ಯಾ , ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಟ್ರೆಂಡ್ ಆಗಲು ರಮ್ಯಾ ಆಂಡ್ ಟೀಮ್ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯ ಅವರ ಟೀಮ್ ಅಂದರೆ 'ಮಹಿಳಾ ಸಾಮರ್ಥವೇ' ಮುಖ್ಯ ಕಾರಣವಂತೆ.ವಾಸ್ತವವಾಗಿ, ರಮ್ಯಾ ಅವರ ಸಾಮಾಜಿಕ ಮಾಧ್ಯಮ ತಂಡವು ಶೇ 85ರಷ್ಟು ಪ್ರತಿಶತ ಮಹಿಳೆಯರನ್ನು ಹೊಂದಿದೆ. ಪ್ರಸ್ತುತ ರಾಹುಲ್ ಗಾಂಧಿ ಗುಜುರಾತ್ ಪ್ರವಾಸದಲ್ಲಿದ್ದಾರೆ. ರಾಹುಲ್ ಯಾವುದೇ ರಾಜ್ಯಕ್ಕೆ ಭೇಟಿ ನೀಡಿದ್ರು, ಅವರು ಯಾವುದೇ ಹೇಳಿಕೆ ನೀಡಿದ್ರು ಟ್ವಿಟರ್ ಗಳಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ.
ರಾಹುಲ್ ಗಾಂಧಿ ಗುಜುರಾತ್ ಪ್ರವಾಸದಲ್ಲಿದ್ದರೆ, ಇತ್ತ ರಮ್ಯಾ ಹಾಗೂ ಅವರ ತಂಡ ಸಾಮಾಜಿಕ ಮಾಧ್ಯಮದಲ್ಲಿ 'ವಿಕಾಸ ಪಾಗಲ್ ಹೊ ಗಯಾ' ಎಂಬ ಹೆಸರಿನಲ್ಲಿ ಕ್ಯಾಂಪೇನ್ ಆರಂಭ ಮಾಡಿತ್ತು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಅವರ ಹೇಳಿಕೆಗಳು ಟ್ರೆಂಡ್ ಹಾಗೂ ಪ್ರಖ್ಯಾತಿ ಗಳಿಸುತ್ತಿವೆ. ಈ ಸಂಬಂಧ ಚರ್ಚೆಗಳು ನಡೆಯುತ್ತಿದೆ. ಇವೆಲ್ಲದುರ ಹಿಂದೆ ರಮ್ಯಾ ಅವರ ಸಕ್ರೀಯತೆ ಎದ್ದು ಕಾಣುತ್ತಿದೆ.
Comments