ಟ್ರಿಪಲ್ ಅಟ್ಯಾಕ್: ಶಾ, ಸ್ಮೃತಿ ಇರಾನಿ, ಯೋಗಿ ಅವರಿಂದ ಕಾಂಗ್ರೆಸ್ ಮೇಲೆ ದಾಳಿ

ಅಮೇಥಿ: 2014ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಿಂದ ರಾಹುಲ್ ಗಾಂಧಿ ಎದುರು ಕಣಕ್ಕೆ ಇಳಿದಿದ್ದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಎದುರು ಸೋಲು ಅನುಭವಿಸಿದ್ದರು. ಆದಾಗ್ಯು ಅದಿನಿಂದ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಸಕ್ರೀಯರಾಗಿದ್ದಾರೆ.
ಗುಜುರಾತ್ ನಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಸ್ಥಾಪಿಸುವ ಉದ್ದೇಶದಿಂದ ರಾಹುಲ್ ಗಾಂಧಿಯವರು ಸತತವಾಗಿ ಪ್ರವಾಸ ಮಾಡುತ್ತಿದ್ದಾರೆ. ಅಷ್ಟರಲ್ಲೇ ಬಿಜೆಪಿ ಹಲವು ದಾಳಿಗಳನ್ನು ಮಾಡುತ್ತಿದೆ. ಬಿಜೆಪಿ ಪಕ್ಷದ ಸಕ್ರೀಯ ರಾಜಕಾರಣಕ್ಕೆ ಹೆದರಿ ರಾಹುಲ್ ಗಾಂಧಿ ಆಗಾಗ ಅಮೇಥಿಗೆ ಭೇಟಿ ನೀಡುತ್ತಿರುತ್ತಾರೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಎರಡು ದಿನಗಳ ಪ್ರವಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಜುರಾತ್ ಅಮೇಥಿ ಬಗ್ಗೆ ಪ್ರಶ್ನೆ ಮಾಡುವ ರಾಹುಲ್ ಗಾಂಧಿ ತಮ್ಮ ಸ್ವಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇತ್ತ ಕಾರ್ತಕರ್ತರನ್ನು ಉದ್ಧೇಶಿಸಿ ಮಾತನಾಡಿದ ಸ್ಮೃತಿ ಇರಾನಿ ನಾನು ಅಮೇಥಿ ಜನರಿಗೆ ಮಾತು ನೀಡಿದ್ದೆ, ಚುನಾವಣೆ ಸೋತ ಬಳಿಕವು ಭೇಟಿ ನೀಡುತ್ತೇನೆ ಎಂದಿದ್ದೆ, ಕೊಟ್ಟ ಮಾತಿನಂತೆ ಅಮೇಠಿಗೆ ಭೇಟಿ ನೀಡುತ್ತಿದ್ದೇನೆ. ಕ್ಷೇತ್ರದ ಜನರ ಜತೆ ಸಂಪರ್ಕದಲ್ಲಿದ್ದೇನೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಆಗಾಗ ಭೇಟಿ ನೀಡುತ್ತಿರುತ್ತಾರೆ. ಬಿಜೆಪಿ ಇಂದಾಗಿಯೇ ಗಾಂಧಿಗಳು ಈ ಹಿಂದೆಗಿಂತಲೂ ಹೆಚ್ಚು ಭೇಟಿ ನೀಡುತ್ತಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದರು.
Comments