ಗುಜರಾತ್ ಭೇಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭಗಳಾಗುವುದಿಲ್ಲ : ಬಿಜೆಪಿ

ರಾಹುಲ್ ಗಾಂಧಿಯವರು ಎಲ್ಲಿಯೇ ಹೋದರು ಅವರ ಕೈಯಲ್ಲಿ ಬರೆದು ಕೊಟ್ಟಿರುವ ಭಾಷಣದ ಪತ್ರವಿರುತ್ತದೆ. ರಾಹುಲ್ ಒಂದು ರೀತಿ ಗಿಣಿಯಾಗಿ ಹೋಗಿದ್ದಾರೆ. ಯಾವುದನ್ನು ಅರ್ಥ ಮಾಡಿಕೊಳ್ಳದೆಯೇ ಹೇಳಿದ್ದನ್ನು ಮಾತನಾಡುತ್ತಾರೆಂದು ತಿಳಿಸಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುಜರಾತ್ ರಾಜ್ಯಕ್ಕೆ ಭೇಟಿಯಾದ ಬಳಿಕ ಯಾವುದೇ ಬದಲಾವಣೆಗಳಾಗುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಸಯೀದ್ ಜಫರ್ ಇಸ್ಲಾಮ್ ಅವರು, ರಾಹುಲ್ ಗಾಂಧಿ ಪ್ರವಾಸದಲ್ಲಿ ಅಭಿವೃದ್ಧಿ ಮಾತುಗಳಿರುವುದಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭಗಳಾಗುವುದಿಲ್ಲ. ರಾಹುಲ್ ಅವರ ಸ್ವಕ್ಷೇತ್ರದ ಚಿತ್ರಗಳನ್ನು ನಾವು ನೋಡಿತ್ತೇವೆ. ಅವರು ಎಂತಹ ನಾಯಕರೆಂಬುದು, ಅಲ್ಲಿನ ಜನರು ಅವರನ್ನು ಎಷ್ಟು ಪ್ರೀತಿ ಮಾಡುತ್ತಾರೆಂಬುದುನ್ನು ಇದೇ ತೋರಿಸುತ್ತದೆ ಎಂದು ಹೇಳಿದ್ದಾರೆ.ಇದರಂತೆ ಮತ್ತೊಬ್ಬ ಬಿಜೆಪಿ ನಾಯಕ ಸಿ.ಕೆ. ಬೋಸ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಅವ್ಯವಸ್ಥೆಯಲ್ಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಸಂಪೂರ್ಣವಾಗಿ ಗೊಂದಲಕ್ಕೆ ಸಿಲುಕಿದ್ದಾರೆ. ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಯಾರಿಗೂ ಸೂಕ್ತ ರೀತಿಯ ಸಲಹೆಗಳಾಗಲೀ ಅಥವಾ ನಿರ್ದೇಶನಗಳನ್ನು ನೀಡಲಾಗುತ್ತಿಲ್ಲ. ನಿಜವಾಗಿ ಹೇಳಬೇಕೆಂದರೆ ಸ್ವತಃ ರಾಹುಲ್ ಗಾಂಧಿಯವರೇ ಗೊಂದಲದಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಹೇಗೆ ನಿರ್ದೇಶನ ನೀಡಬೇಕೆಂದು ಅವರಿಗೆ ತಿಳಿಯುತ್ತಿಲ್ಲ. ಹೀಗಾಗಿ ಗುಜರಾತ್ ಭೇಟಿಯಿಂದ ಯಾವುದೇ ವ್ಯತ್ಯಾಸಗಳಾಗುವುದಿಲ್ಲ ಎಂದಿದ್ದಾರೆ.
Comments