ನನ್ನ ವಿರುದ್ಧ ಸಂಚು ನಡೆಸಿದವರು ಮಣ್ಣುಮುಕ್ಕುತ್ತಾರೆ : ನರೇಂದ್ರ ಮೋದಿ
ಪ್ರಧಾನಿಯಾದ ಬಳಿಕ ಮೊಟ್ಟಮೊದಲ ಬಾರಿಗೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ ಅವರು, "ಎದುರಾಳಿಗಳನ್ನು ಬಗ್ಗುಬಡಿಯುವ ಶಕ್ತಿಯನ್ನು ಶಿವ ನನಗೆ ಕರುಣಿಸಿದ್ದಾನೆ. ಭೋಲೆಬಾಬಾ ಆಶೀರ್ವಾದ ನನಗೆ 2001ರಿಂದಲೂ ಎದುರಾಳಿಗಳ ವಿರುದ್ಧ ಹೋರಾಡುವ ಶಕ್ತಿ ತುಂಬಿದೆ" ಎಂದು ಹೇಳಿದರು.
"ನನ್ನ ವಿರುದ್ಧ ಸಂಚು ನಡೆಸಿದವರು ಮಣ್ಣುಮುಕ್ಕುತ್ತಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜತೆಗೆ ಹಿಂದಿನ ಯುಪಿಎ ಸರ್ಕಾರ ಅಭಿವೃದ್ಧಿ ವಿರೋಧಿ ಹಾಗೂ ಸೂಕ್ತ ನೀತಿಗಳನ್ನು ಜಾರಿಗೊಳಿಸಲು ವಿಫಲವಾಗಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಹಠಕೇಶ್ವರ ಮಹಾದೇವ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, "ಭೋಲೆ ಬಾಬಾ ಆಶೀರ್ವಾದ ನನಗೆ ವಿಷವನ್ನೂ ಸೇವಿಸಿ ಜೀರ್ಣಿಸಿಕೊಳ್ಳುವ ಶಕ್ತಿ ನೀಡಿದೆ. ಈ ಕಾರಣದಿಂದ 2001ರಿಂದಲೂ ನನನೆ ಕೆಡುಕು ಬಗೆಯುವವರ ವಿರುದ್ಧ ಹೋರಾಟಲು ಸಾಧ್ಯವಾಗಿದೆ. ಈ ಶಕ್ತಿ ತಾಯ್ನೆಲದ ಸೇವೆ ಮಾಡುವ ಅವಕಾಶ ಕಲ್ಪಿಸಿದೆ" ಎಂದರು. "ನಾನು ಮೋದಿ. ಗಾಂಧಿ ಹಾಗೂ ಸರ್ದಾರ್ ನಾಡಿನಲ್ಲಿ ಬೆಳೆದವನು. ಆದ್ದರಿಂದ ಎಷ್ಟು ಕಳ್ಳರು ಬಂದು ಹೋದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅಂತಿಮ ವಾಗಿ ಸತ್ಯ ಮತ್ತು ಪ್ರಮಾಣಿಕತೆ ಗೆಲ್ಲುತ್ತದೆ" ಎಂದು ಬಣ್ಣಿಸಿದರು.
Comments