ಹುಟ್ಟೂರು ಗುಜುರಾತ್ ನ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ



ಮೂರು ದಿನಗಳ ಕಾಲ ಗುಜುರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ತಮ್ಮ ಶಾಲೆಗೆ ಭೇಟಿ ನೀಡಿದ್ದಾರೆ. ಅಲ್ಲದೇ ತಮ್ಮ ತವರೂರಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಅಹಮದಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರ ತಮ್ಮ ಹುಟ್ಟೂರು ವಡ್ನಗರ್ ನ ಪ್ರವಾಸ ದಲ್ಲಿದ್ದು,ಹುಟ್ಟೂರಿನಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಿಇಇಆರ್ ಎಸ್ ಮೆಡಿಕಲ್ ಕಾಲೇಜ್ ನ್ನು ಮೋದಿ ಉದ್ಘಾಟಿಸಿದರು. ಈ ವೇಳೆ ಗುಜುರಾತ್ ಸಿಎಂ ವಿಜಯ್ ರೂಪಾನಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು.
ತಾನು ಕಲಿತ ಶಾಲೆಗೆ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಮೋದಿ ಅವರಿಗೆ ಜನರು ಭರ್ಜರಿ ಸ್ವಾಗತ ನೀಡಿದರು. ರೋಡ್ ಶೋ ಮೂಲಕ ಜನರೊಂದಿಗೆ ಬೆರೆತರು. ತಾನು ಓದಿದ ಶಾಲೆಗೆ ಭೇಟಿ ನೀಡಿದ ಅವರು ಶಿರ ಬಾಗಿ ನಮಿಸಿ ತಮ್ಮ ಶಾಲೆಯ ಒಳಗೆ ಪ್ರವೇಶಿಸಿ ತನ್ನ ಬಾಲ್ಯದ ದಿನಗಳನ್ನು ನೆನಪಿಸಿದರು.
Comments