ಸ್ವ ಉದ್ಯೋಗಿಗಳಾಗುವಂತೆ ಯುವಕರಿಗೆ ಕರೆ ನೀಡಿ ಸಿ.ಟಿ ರವಿ

ಚಿಕ್ಕಮಂಗಳೂರು: ಎಲ್ಲಾ ವಿದ್ಯಾವಂತರಿಗೆ ಉದ್ಯೋಗ ಸಿಗುವುದು ಕಷ್ಟದ ಕೆಲಸ, ಆದ್ದರಿಂದ ಸ್ವಯಂ ಉದ್ಯೋಗಿಗಳಾಗಿ ಎಂದು ಶಾಸಕ ಸಿ.ಟಿ ರವಿ ಯುವಕರಿಗೆ ಕರೆ ನೀಡಿದ್ದಾರೆ. ಐಡಿಎಸ್ ಡಿ ಕಾಲೇಜಿನಲ್ಲಿ ಸಂಜೀವಿನಿ -ಕೆಎಸ್ ಆರ್ ಎಲ್ ಪಿಎಸ್ ಹಾಗೂ ಜಿಪಂ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಅಭ್ಯರ್ಥಿ ಪಾಲಕ ಪೋಷಕರಿಗೆ ಸಮಾಲೋಚನೆ, ಒಗ್ಗೂಡಿಸುವಿಕೆ ಉದ್ಯೋಗ ಮೇಳ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಗತ್ತಿನಲ್ಲಿ ಅತಿ ಹೆಚ್ಚು ಯುವಕರಿಗೆ ದೇಶವೆಂದರೆ ಅದು ಭಾರತ 35 ವರ್ಷದ ಒಳಗಿನ ಸುಮಾರು 80ಕೋಟಿ ಯುವ ಸಮುದಾಯದವರಿದ್ದಾರೆ. ಅವರೆಲ್ಲರಿಗೂ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಯುವಕರು ಸ್ವ ಉದ್ಯೋಗದಲ್ಲಿ ಮೊದಲು ತರಬೇತಿ ನೀಡಲಾಗುತ್ತದೆ. ನಂತರ 50 ಸಾವಿರ ರೂ ನೀಡಲಾಗುತ್ತದೆ. ಅದರಲ್ಲಿ 10 ಸಾವಿರ ಸಹಾಯಧನ ಹಾಗೂ 4 ಸಾವಿರ ಸಾಲದ ರೂಪದಲ್ಲಿ ಇರುತ್ತದೆ. ಉದ್ಯೋಗಾಕಾಂಕ್ಷಿಗಳು ಸಾಲಕ್ಕಾಗಿ ತರಬೇತಿಗೆ ಸೇರದೆ ಸ್ವ ಉದ್ಯೋಗಿಗಳಾಗಬೇಕೆಂಬ ಉದ್ದೇಶದಿಂದ ಸೇರಬೇಕು ಎಂದು ಕಿವಿ
ಮಾತು ಹೇಳಿದರು.
Comments