ಸಿಎಂ ಭ್ರಷ್ಟಾಚಾರ ಬಯಲಿಗೆಳೆಯಲು ಬಂದಿದ್ದವರು ತಾವೇ ಪೇಚಿಗೆ ಸಿಲುಕಿದ್ದೇಕೆ ?

07 Oct 2017 2:44 PM | Politics
635 Report

ಸಿಎಂ ಮೇಲೆ ಭ್ರಷ್ಟ ಚಾರ ಆರೋಪ ಮಾಡಿದ ವೇಳೆ ಬಿಜೆಪಿ ನಾಯಕರು ಪೇಚಿಗೆ ಸಿಲುಕಿದರು. ಪಕ್ಷದ ಕಚೇರಿಯಲ್ಲಿ ನಡೆಸುತ್ತಿದ್ದ ಸುದ್ಧಿಗೋಷ್ಠಿಯ ವೇಳೆ ವರ್ಷದ ಹಿಂದೆ ಜಗದೀಶಶೆಟ್ಟರ್ ಬಿಡುಗಡೆ ಮಾಡಿದ್ದ ದಾಖಲೆಯನ್ನೆ ಮತ್ತೆ ರಿಲೀಸ್ ಮಾಡಿದರು.

ಮಾಧ್ಯಮದವರು ವಿಷಯ ತಿಳಿಸಿದಾಗ ಬಿಜೆಪಿ ಮುಖಂಡ ಬಿ ಜೆ ಪುಟ್ಟಸ್ವಾಮಿ ತಬ್ಬಿಬ್ಬಾದರು. ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಪತ್ರಿಕಾಗೋಷ್ಠಿಯಿಂದ ಎದ್ದು ಹೋಗುವುದಕ್ಕೆ ಯತ್ನಿಸಿದರು. ಈ ವೇಳೆ ಬಿಜೆಪಿ ನಾಯಕರು ತೀವ್ರ ಮುಜುಗರ ಅನುಭವಿಸಿದರು. ಸಿಎಂ ಭ್ರಷ್ಟಾಚಾರ ಬಯಲಿಗೆಳೆಯಲು ಬಂದಿದ್ದವರು ತಾವೇ ಪೇಚಿಗೆ ಸಿಲುಕುವಂತಾಯಿತು.

Edited By

Shruthi G

Reported By

Madhu shree

Comments