ಅನುಪಮಾ ಶೆಣೈ ಹೊಸ ಪಕ್ಷ ಘೋಷಣೆ



ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿ ಸಾಮಾಜಿಕ ಕಾರ್ಯಕರ್ತೆಯಾಗಿರೋ ಅನುಪಮ ಶೆಣೈ ಹೊಸ ಪಕ್ಷ ಕಟ್ಟುತ್ತಿದ್ದಾರೆ. ನವೆಂಬರ್ ನಲ್ಲಿ ಹೊಸ ಪಕ್ಷ ಘೋಷಣೆ ಮಾಡುವುದಾಗಿ ಸುದ್ದಿಗಾರರಿಗೆ ಶೆಣೈ ಹೇಳಿದ್ದಾರೆ.
ಶಿವಮೊಗ್ಗ: ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಬಂದಿದ್ದ ಅನುಪಮಾ ಶೆಣೈ ಅವರು, ಮಾಧ್ಯಮದವರ ಜತೆಗೆ ಮಾತನಾಡಿದರು. ಹೊಸ ಪಕ್ಷ ನವೆಂಬರ್ ನ ಮೊದಲ ವಾರದಲ್ಲಿ ಘೋಷಣೆ ಮಾಡುವುದಾಗಿ ಹೇಳಿದರು. ಪೊಲೀಸಿಂಗ್ ಪಾಲಿಟಿಕ್ಸ್ ರೀತಿಯಲ್ಲಿ ಪಕ್ಷ ರಚನೆಯಾಗಲಿದ್ದು, ಈ ಮೂಲಕ ಮಹಿಳೆಯೊಬ್ಬರು ರಾಜ್ಯದಲ್ಲಿ ಹೊಸ ಪಕ್ಷ ಕಟ್ಟಿದಂತಾಗುತ್ತದೆ ಎಂದರು.
ಪ್ರಾಮಾಣಿಕವಾಗಿ ಕೆಲಸ ಮಾಡಿದರು ಇಂದಿನ ಸ್ಥಿತಿ ರಾಜಕಾರಿಣಿಗಳ ಭಯದಿಂದ ಕೆಲಸ ಮಾಡುವಂತಾಗಿದೆ. ತಮ್ಮ ಪಕ್ಷದ ಮೂಲಕ ರಾಜಕಾರಿಣಿಗಳಿಗೆ ಭಯ ಹುಟ್ಟಿಸುವ ಕೆಲಸ ಮಾಡಲಿದ್ದೇನೆ, ಯಾವ ಪಕ್ಷವೂ ಸರಿ ಇಲ್ಲ, ಅವರ ಆಂತರಿಕ ಸಂವಿಧಾನವನ್ನು ಓದಿದ್ದೇನೆ, ಧ್ಯೇಯ ಒಳ್ಳೆಯದಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ತಿಳಿಸಿದರು.
Comments