ಚಾಮುಂಡೇಶ್ವರಿ ಜೆಡಿಎಸ್ ಭದ್ರಕೋಟೆ, ಸಿದ್ದುಗೆ ಸೋಲು ಗ್ಯಾರಂಟಿ : ಜಿ.ಟಿ.ದೇವೇಗೌಡ

ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂದು ಹೇಳುತ್ತಿದ್ದಾರೆ. ಆದರೆ ಅವರು ವರುಣ ಕ್ಷೇತ್ರ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಿರುವುದಾದರೂ ಏತಕ್ಕೆ ಜಿ.ಟಿ.ದೇವೇಗೌಡ ಎಂದು ಪ್ರಶ್ನಿಸಿದರು.
ಒಂದು ವೇಳೆ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದೇ ಆದರೆ ಸೋಲು ಕಟ್ಟಿಟ್ಟ ಬುತ್ತಿ. ಚಾಮುಂಡೇಶ್ವರಿ ಜೆಡಿಎಸ್ ಭದ್ರಕೋಟೆ. ಅದು ಎಂದಿಗೂ ಕಾಂಗ್ರೆಸ್ ಪಾಲು ಆಗುವುದಿಲ್ಲ ಎಂದರು. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎನ್ನುವ ಮೂಲಕ ಇಲ್ಲಿನ ಜೆಡಿಎಸ್‍ನ ಕಾರ್ಯಕರ್ತರನ್ನು ಸೆಳೆಯುವ ತಂತ್ರ ನಡೆಸಲಾಗುತ್ತಿದೆ. ಆದರೆ ಅದು ಅಸಾಧ್ಯ. ಕ್ಷೇತ್ರದ ಯಾವೊಬ್ಬ ಜೆಡಿಎಸ್ ಕಾರ್ಯಕರ್ತನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ತಾಲ್ಲೂಕು ಪಂಚಾಯ್ತಿ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆವರೆಗೂ ಅವರನ್ನು ಗೆಲ್ಲುಸುತ್ತಾ ಬಂದಿದ್ದು ನಾನು ಮತ್ತು ನನ್ನ ಬೆಂಬಲಿಗರು ಎಂದಿಗೂ ಅವರು ಸ್ವತಂತ್ರವಾಗಿ ಗೆದ್ದವರಲ್ಲ. ಅವರಿಗೆ ಸ್ವತಂತ್ರವಾಗಿ ಗೆಲ್ಲುವ ಶಕ್ತಿಯೂ ಇಲ್ಲ ಎಂದು ಟೀಕಿಸಿದರು. ನಾನು ಯಾವುದೇ ಕಾರಣಕ್ಕು ಜೆಡಿಎಸ್ ತೊರೆಯುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದರೂ ಮುಂದಿನ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ 9 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಎಸ್ ನಾಯಕ ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್‍ನವರು ಕುರುಬ ಜನಾಂಗ ಹಾಗೂ ಜೆಡಿಎಸ್ ವಿರುದ್ಧ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಕುತಂತ್ರ ನಡೆಯುವುದಿಲ್ಲ. ಯಾವುದೇ ರೀತಿ ಕುತಂತ್ರ ನಡೆಸಿದರೂ ಜೆಡಿಎಸ್‍ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
Comments