ಇಂದು ದೆಹಲಿಯ ರಾಜ್ ಘಾಟ್ ನಲ್ಲಿ ಮೌನ ಪ್ರತಿಭಟನೆ ನಡೆಸಲಿರುವ ಅಣ್ಣಾ ಹಜಾರೆ
ಲೋಕ್ ಪಾಲ್ ಮಂಡನೆಗೆ ಒತ್ತಾಯಿಸಿ ನಡೆಸಿದ ಸಾಂಕೇತಿಕ ನಿರಶನದ ನಂತರ ಮಾತನಾಡಿದ ಅಣ್ಣಾ ಹಜಾರೆ ಇದುವರೆಗೂ ಪ್ರಧಾನಿ ಮೋದಿಯವರಿಗೆ 30 ಪತ್ರಗಳನ್ನ ಬರೆದಿದ್ದು ಇಲ್ಲಿಯವರೆಗೂ ಮೋದಿಯಿಂದ ಒಂದೇ ಒಂದು ಪತ್ರಕ್ಕು ಉತ್ತರ ದೊರೆತಿಲ್ಲ ಅಂತಾ ಹೇಳಿದ್ದಾರೆ.
ಗಾಂಧಿವಾದಿ ಅಣ್ಣಾ ಹಜಾರೆ ಇಂದು ದೆಹಲಿಯ ರಾಜ್ ಘಾಟ್ ನಲ್ಲಿ ಮೌನ ಪ್ರತಿಭಟನೆ ನಡೆಸಲಿದ್ದಾರೆ. ಲೋಕಪಾಲ್ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ . ಸಾಂಕೇತಿಕ ನಿರಶನದ ನಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದಿರುವ ಅಣ್ಣಾ ಹಜಾರೆ ಪ್ರತಿಭಟನೆ ವೇಳೆ ಹಲವು ವಿಷಯಗಳನ್ನ ಸರ್ಕಾರದ ಮುಂದಿಡುತ್ತೇವೆ ಎಂದಿದ್ದಾರೆ.
Comments