ಸಿನಿಮಾ ಸ್ಟಾರ್ ಗಳ ರಾಜಕೀಯ ಒಲವು
ಈ ನಮ್ಮ ಸಿನಿಮಾ ಸ್ಟಾರ್ ಗಳು ತಮ್ಮ ಬಜಾರ್ ಇರೋವರ್ಗು ದರ್ಬಾರ್ ನಡ್ಸಿ ಇನ್ನೇನ್ ನಮ್ಮ ದುನಿಯಾ ಮುಗಿತು ಅಂತ ಗೊತ್ತಾಗಿ ತಮ್ಮ ಜಾಗಕ್ಕೆ ಹೊಸ ಹೊಸ ಮುಖಗಳು ಬಂದು ತಮ್ಮ ತಮ್ಮ ಬುಡ ಅಳ್ಳಾಡೋಕೆ ಸ್ಟಾರ್ಟ್ ಆಗ್ತಿದ್ದಂತೆ ಮುಂದೇನ್ ಮಾಡ್ಬೇಕು ಅಂತ ಗೊತ್ತಾಗ್ದೆ ತಲೆಕೆಡಿಸ್ಕೊಂಡು ಕೂತಿದ್ದಾಗ ಮೋಸ್ಟ್ಲಿ ಅವ್ರಿಗೆ ಥಟ್ ಅಂತ ಹೊಳೆಯೋ ಐಡಿಯಾನೇ ಈ ರಾಜಕೀಯ ಅನ್ಸುತ್ತೆ.
ಇತ್ತೀಚೆಗೆ ಕೆಲವು ಸ್ಟಾರ್ ನಟರುಗಳು ರಾಜಕೀಯ ಸೇರುವ ತಮ್ಮ ಮನದ ಇಂಗಿತವನ್ನು ಹೊರ ಹಾಕಿ ಅದಕ್ಕೆ ಬೇಕಾದ ತಯಾರಿ ಮಾಡ್ಕೊಳ್ಳುವುದರ ಜೊತೆಗೆ ಜನರಲ್ಲಿ ಈಗ ಇರೋ ರಾಜಕಾರಣಿಗಳ ದೊಂಬರಾಟದಲ್ಲಿ ಇವ್ರೆಲ್ಲಾ ಬಂದು ಅದೇನ್ ದಬಾಕ್ತರಪ್ಪ ಅನ್ನೊ ಉದಾಸೀನದ ನಿರೀಕ್ಷೆನ ಹುಟ್ಟು ಹಾಕಿರೋದಂತು ಸತ್ಯ.ಅತ್ತ ಕಡೆ ತಮಿಳುನಾಡಿನಲ್ಲಿ ಕಮಲ್ ಹಾಸನ್ ತಾವೇ ಹೊಸಪಕ್ಷ ಕಟ್ಟಿ ಎಲೆಕ್ಷನ್ ಫೇಸ್ ಮಾಡ್ತಿನಿ ಅಂತ ಹೊರಟಿದ್ರೆ ಅದೇ ರಾಜ್ಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ತಾನು ಸೇರಬೇಕೆಂದಿರುವ ಪಕ್ಷದ ಹೆಸರನ್ನು ನೇರವಾಗಿ ಹೇಳದೆ ಪರೋಕ್ಷವಾಗಿ ಆ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದರೊಂದಿಗೆ ತನ್ನದು ಅದೇ ಪಕ್ಷ ಅನ್ನೋದನ್ನ ಸಾಬೀತು ಮಾಡತೊಡಗಿದ್ದಾರೆ.ಇನ್ನು ಪಕ್ಕದ ಆಂದ್ರದಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪವನ್ ಕಲ್ಯಾಣ್ ಕೂಡ ಅದಾಗಲೇ ಒಂದು ಅಧಿಕೃತ ಪಕ್ಷದೊಂದಿಗೆ ಗುರುತಿಸಿಕೊಂಡು ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.ಇನ್ನು ನಮ್ಮ ಸ್ಯಾಂಡಲ್ ವುಡ್ ವಿಷ್ಯಕ್ಕೆ ಬರೋದಾದ್ರೆ ಇಲ್ಲಿ ಸೂಪರ್ ಸ್ಟಾರ್ ಅಂತ ಬಿರುದಾಂಕಿತರಾಗಿರೋ ಉಪ್ಪಿ ಅಲಿಯಾಸ್ ಉಪೇಂದ್ರ ಕೂಡ ತುಂಬಾ ವರ್ಷಗಳಿಂದ ರಾಜಕೀಯಕ್ಕೆ ಬರುವ ತಮ್ಮ ಇಂಗಿತವನ್ನು ತಮ್ಮ ಸಿನಿಮಾದ ಮೂಲಕ ಮುನ್ಸೂಚನೆ ಕೊಡುತ್ತಾ ಬಂದಿದ್ದವರು ಈಗ ಅಧಿಕೃತವಾಗಿ ಮುಂದಿನ ಚುನಾವಣೆಗೆ ತಾನೆ ಪ್ರಜಾಕೀಯ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳುವ ಮೂಲಕ ಹಾಲಿ ಇರುವ ಪಕ್ಷಗಳಿಗೆ ಸಂದೇಶ ರವಾನಿಸಿದ್ದಾರೆ.
ಈಗ ನಾವು ಹೇಳೋಕೆ ಹೊರಟಿರೋದು ಏನಪ್ಪ ಅಂದ್ರೆ ಈ ರೀತಿ ಸಿನಿಮಾ ನಟರು ಯಶಸ್ಸಿನ ಉತ್ತುಂಗದಲ್ಲಿದ್ದಾಗ ಅಥವ ತಮ್ಮ ಸಿನಿಜರ್ನಿ ಮುಗಿಯುವ ಹಂತಕ್ಕೆ ಬಂದಾಗ ರಾಜಕೀಯದ ಕಡೆ ಮುಖ ಮಾಡೋದು ಹೊಸದೇನಲ್ಲ.ತುಂಬಾ ಕಲಾವಿದರು ಯಶಸ್ಸಾಗಿ ಆಡಳಿತ ನಡೆಸಿರುವ ಉದಾಹರಣೆಗಳು ಸಾಕಷ್ಟಿವೆ.ಒಟ್ಟಿನಲ್ಲಿ ರಾಜಕೀಯಕ್ಕೆ ಬರುವಾಗ ಸೇಮ್ ತಮ್ಮ ಸಿನಿಮಾ ಸ್ಟೈಲ್ ನಲ್ಲೇ ಡೈಲಾಗ್ ಹೊಡೆಯುತ್ತಾ ಬರುವ ನಾಯಕ ನಟ/ನಟಿಯರು ರಣರಂಗಕ್ಕೆ ಧುಮುಕಿದ ಮೇಲೆ ಅಲ್ಲಿನ ಹಳೆ ತಿಮಿಂಗಲಗಳ ನಡುವೆ ಸೆಣಸಲಾಗದೆ ಥೇಟ್ ರೆಗ್ಯೂಲರ್ ರಾಜಕಾರಣಿಗಳಾಗುವ ಸಂಭವವೇ ಹೆಚ್ಚು ಹಾಗಾಗಿ ಯಾವುದೇ ಕಾರಣಕ್ಕೂ ಆ ರೀತಿ ಬದಲಾಗದೆ ರಾಜಕೀಯಕ್ಕೆ ಎಂಟ್ರಿ ಕೊಡುವಾಗ ಏನು ನಿಮ್ಮ ಆಲೋಚನೆ,ಉದ್ದೇಶ,ಜನಪರ ಕಾಳಜಿ ,ಇರುತ್ತೋ ಅದನ್ನು ಕೊನೆವರೆಗೂ ಕಾಪಾಡಿಕೊಂಡು ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಿ ಎಂಬುದೇ ನಿಮಗೆ ಸಪೋರ್ಟ್ ಮಾಡಿ ಮತ ಹಾಕುವ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಆಶಯ.
Comments