ತೆರಿಗೆ (GST) ಸುಧಾರಣಾ ಕ್ರಮಕ್ಕೆ ಅರುಣ್ ಜೇಟ್ಲಿ ಹೊಸ ಪ್ಲಾನ್

03 Oct 2017 2:13 PM | Politics
369 Report

ಜಿ.ಎಸ್.ಟಿ. ಅಡಿಯಲ್ಲಿ ಶೇ. 5 ರಿಂದ ಶೇ. 28 ರ ವರೆಗೆ 4 ಶ್ರೇಣಿಗಳಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಈ ವ್ಯವಸ್ಥೆ ಜಾರಿಗೆ ಬಂದು 3 ತಿಂಗಳಾಗಿದೆ. ತೆರಿಗೆ ಸಂಗ್ರಹ ಸರಿಯಾದಂತೆ ಶ್ರೇಣಿಗಳನ್ನು ಕಡಿತಗೊಳಿಸಬಹುದಾಗಿದೆ. ಸಣ್ಣ ತೆರಿಗೆದಾರರ ಮೇಲೆ ತೆರಿಗೆ ಪಾವತಿ ಬದ್ಧತೆಯನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ....

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.)ಯ ಹಂತಗಳನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದ್ದು, ತೆರಿಗೆ ಸುಧಾರಣಾ ಕ್ರಮಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. ಫರೀದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿ.ಎಸ್.ಟಿ. ತೆರಿಗೆ ಸಂಗ್ರಹ ಶ್ರೇಣಿಗಳನ್ನು ಇಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ 4 ಹಂತದ ತೆರಿಗೆ ವ್ಯವಸ್ಥೆ ಇದೆ. ಇನ್ನಷ್ಟು ಸರಳಗೊಳಿಸಿ ಹಂತಗಳನ್ನು ಕಡಿಮೆ ಮಾಡಬಹುದು. ಜನಸಾಮಾನ್ಯರು ಬಳಸುವ ಅಗತ್ಯ ವಸ್ತುಗಳಿಗೆ ಕಡಿಮೆ ತೆರಿಗೆ ಇರಬೇಕು. ತೆರಿಗೆ ಸಂಗ್ರಹ ಸರಿಯಾದ ನಂತರ ತೆರಿಗೆ ಹಂತ(ಶ್ರೇಣಿ) ಇಳಿಕೆ ಮಾಡುವ ಚಿಂತನೆ ಇದೆ ಎಂದು ತಿಳಿಸಿದ್ದಾರೆ.

Edited By

Suresh M

Reported By

Madhu shree

Comments