'ಯುವಕರು ಸೇನೆಗೆ ಸೇರಿದರೆ, ವಿದೇಶಿ ಮದ್ಯ ಸೇವಿಸಬಹುದು' ಕೇಂದ್ರ ಸಚಿವರ ವಿವಾದಿತ ಹೇಳಿಕೆ

ದಲಿತ ಯುವಕರು ನಾಡ ಮದ್ಯ ಸೇವಿಸುವ ಬದಲು , ಭಾರತೀಯ ಸೇನೆಗೆ ಸೇರಿ ವಿದೇಶಿ ಮದ್ಯ ಕುಡಿಯಿರಿ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಜಿಯಾದ ನಾಯಕ, ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಕರೆ ನೀಡಿದ್ದಾರೆ.
ಪುಣೆ: ದಲಿತ ಯುವಕರು ನಾಡ ಮದ್ಯ ಸೇವಿಸುವ ಬದಲು , ಭಾರತೀಯ ಸೇನೆಗೆ ಸೇರಿ ವಿದೇಶಿ ಮದ್ಯ ಕುಡಿಯಿರಿ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಜಿಯಾದ ನಾಯಕ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಥಾವಾಲೆ ವಿವಾದಾತ್ಮಕ ಹೇಳಿಕೆ ನೀಡಿದ್ದು. ಈ ಮೂಲಕ ಕರೆ ನೀಡಿದ್ದಾರೆ.
ಪುಣೆಯಲ್ಲಿ ಮಾತನಾಡಿರುವ ಅವರು, ರಕ್ಷಣಾ ಪಡೆಗಳಲ್ಲಿ ದಲಿತರು ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ತಾವು ವೈಯಕ್ತಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಸೇನೆ ಉತ್ತಮ ಆಹಾರ ಹಾಗೂ ಮದ್ಯ ಒದಗಿಸುತ್ತದೆ. ನಿರುದ್ಯೋಗಿಗಳಾಗಿ ನಾಡ ಮದ್ಯ ಕುಡಿಯುವ ಬದಲುದಲಿತ ಯುವಕರು ಸೇನೆಯನ್ನು ಸೇರಿದರೆ, ಅಲ್ಲಿ ವಿದೇಶಿ ಮದ್ಯ ಕುಡಿಯಬಹುದು ಎಂದು ಅಥಾವಾಲೆ ಸಲಹೆ ನೀಡಿದರು. ಸೇನೆಗೆ ಸೇರಿದ ಬಳಿಕ ಹೆಚ್ಚು ಜನ ಹುತಾತ್ಮರಾಗುತ್ತಿದ್ದಾರೆ ಎಂಬ ವಿಷಯವನ್ನು ತಳ್ಳಿ ಹಾಕಿರುವ ಅಥವಾಲೆ, ಪ್ರತಿ ನಿತ್ಯ ಸಂಭವಿಸುವ ರಸ್ತೆ ಅಪಘಾತ ಹಾಗೂ ಹೃದಯಾಘಾತದಿಂದ ಜನ ಸಾಯುತ್ತಿದ್ದಾರೆ. ಸೇನೆಯಲ್ಲಿ ಮಾತ್ರ ಜನ ಸಾಯಿಯುತ್ತಾರೆ ಎಂಬುದು ತಪ್ಪು ಎಂದಿದ್ದಾರೆ.
Comments