ಜಿದ್ದಾ ಜಿದ್ದಿನ ರಾಜಕೀಯದಲ್ಲಿ ಶುರುವಾದ 'ಬೆಂಕಿ ರಾಜಕೀಯ'

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಮಧ್ಯೆ ಮಾತಿನ ಸಮರ ನಡೆಯುವುದು ಸಾಮಾನ್ಯ. ಆದರೆ ಈ ಬಾರಿ ಹೊಸದಾಗಿ ಬೆಂಕಿ ರಾಜಕೀಯ ಯೊಂದು ಶುರವಾಗಿಬಿಟ್ಟಿದೆ.
ಬೆಂಗಳೂರು: ಈ ಬಾರಿ ಹೊಸದಾಗಿ ಬೆಂಕಿ ರಾಜಕೀಯ ಯೊಂದು ಶುರವಾಗಿಬಿಟ್ಟಿದೆ. ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾ ಜಿದ್ದಿನ ರಾಜಕೀಯಕ್ಕೆ ಇಮ್ಮುಡಿ ನೀಡಿದೆ. ಈ ಮಧ್ಯೆ 'ಬೆಂಕಿ ರಾಜಕೀಯ' ತೀವ್ರಗೊಂಡಿದೆ.
ಪರಸ್ಪರ ಆಡಳಿತಾರೂಢ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಕಿ ಹಚ್ಚುವವರು ಎಂಬ ಆರೋಪ-ಪ್ರತ್ಯಾರೋಪಗಳನ್ನು ಮಾ಼ಡುತ್ತಾ ರಾಜಕೀಯ ಕೆಸರೆರಚಾಟದಲ್ಲಿ ತೊ಼ಡಗಿಸಿಕೊಂಡು ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ ಎಂದು ಕೇಳಿ ಬರುತ್ತಿದೆ. ಈ ಬಾರಿ ಚುನಾವಣೆಗೂ ಮುನ್ನ ಮಾತಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿಜೆಪಿಯವರು ಬೆಂಕಿ ಹಚ್ಚುವವರು ಎಂದು ಕಾಂಗ್ರೆಸ್ ಆರೋಪಿಸಿದರೆ, ಕಾಂಗ್ರೆಸ್ ನವರೇ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಭಾನುವಾರ ಆರೋಪ ಮಾಡಿದ್ದಾರೆ.
'ಸಿಎಂ ಸಿದ್ದರಾಮಯ್ಯ ಅವರು ಕೈಯಲ್ಲಿ ಪೆಟ್ರೋಲ್ ಮತ್ತು ಬೆಂಕಿ ಪೊಟ್ಟಣ ಹಿಡಿದುಕೊಂಡು ಜಾತಿ,ಧರ್ಮ ಭಾಷೆಯ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ'. 'ಇವರು ರಾಜ್ಯದ ಪಾಲಿಗೆ ಬೆಂಕಿ ರಾಮಯ್ಯ ಆಗಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಚಿತ್ರದುರ್ಗದಲ್ಲಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಬಿಜೆಪಿ, ಆರ್ ಎಸ್ ಎಸ್,ಧರ್ಮದ ಹೆಸರಿನಲ್ಲಿ ಈ ಕೆಲಸ ಮಾಡುತ್ತಿದೆ. ಮುಂದಿನ ಬಾರಿಯೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗ ಇವರು ಹಚ್ಚುವ ಬೆಂಕಿ ನಂದಿಸುತ್ತೇವೆ' ಎಂದರು.
Comments