ನಾನು ಹಿಂದು ಎಂದು ರಾಹುಲ್ ಬಹಿರಂಗವಾಗಿ ಘೋಷಿಸಿಲಿ : ಸುಬ್ರಮಣಿಯನ್ ಸ್ವಾಮಿ

ನಾನು ಹಿಂದು ಎಂಬುದಾಗಿ ರಾಹುಲ್ ಗಾಂಧಿ ಬಹಿರಂಗವಾಗಿ ಘೋಷಿಸಿಕೊಳ್ಳಲಿ ಎಂದು ಸುಬ್ರಮಣಿಯನ್ ಸ್ವಾಮಿ ಕಾಲೆಳೆದಿದ್ದಾರೆ. ಅಲ್ಲದೇ ತೀವ್ರ ವಾಗ್ದಾಳಿ ನಡೆಸಿರುವ ಫೈಯರ್ ಬ್ರ್ಯಾಂಡ್ ಸ್ವಾಮಿ, ನನ್ನ ಅಂದಾಜಿನ ಪ್ರಕಾರ ರಾಹುಲ್ ಕ್ರಿಶ್ಚಿಯನ್ ಹಾಗೂ ಜನ್ ಪಥ್ 10ರ ನಿವಾಸದೊಳಗೆ ಚರ್ಚ್ ಇದ್ದಿರುವುದಾಗಿ ಆರೋಪಿಸಿದ್ದಾರೆ.
ಮುಂಬರುವ ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಗುಜರಾತ್ ಪ್ರವಾಸದ ವೇಳೆ ದೇವಾಲಯಕ್ಕೆ ಭೇಟಿ ನೀಡಿರುವ ಕುರಿತು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಗುರುವಾರ ತಿರುಗೇಟು ನೀಡಿದ್ದು, ರಾಹುಲ್ ಮೊದಲು ಹಿಂದು ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಎಸೆದಿದ್ದಾರೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ 3 ದಿನಗಳ ಕಾಲ ಗುಜರಾತ್ ಪ್ರವಾಸದ ವೇಳೆ ಹಲವಾರು ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ಕಳಂಕವನ್ನು ಮುಚ್ಚಿ ಹಾಕುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹತಾಶರಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿರುವಂತಿದೆ ಎಂದು ಸ್ವಾಮಿ ವ್ಯಂಗ್ಯವಾಡಿದ್ದಾರೆ.
Comments