ಬಿಬಿಎಂಪಿ ಉಪ ಮೇಯರ್ ಆಯ್ಕೆ ವಿಚಾರದಲ್ಲಿ ಗೊಂದಲವಿಲ್ಲ : ದೇವೇಗೌಡ

ಪದ್ಮನಾಭ ನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದವರಿಗೆ ಈ ಬಾರಿ ಅವಕಾಶ ನೀಡಬೇಕೆಂಬ ಒತ್ತಡ ಇತ್ತು. ನನ್ನ ಮತ್ತು ಕುಮಾರಸ್ವಾಮಿ ಅವರ ಇಚ್ಛೆಯೂ ಅದೇ ಆಗಿತ್ತು ಎಂದು ದೇವೇಗೌಡರು ಹೇಳಿದರು.
ಬಿಬಿಎಂಪಿ ಉಪ ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಇರಲಿಲ್ಲ. ಈ ಬಗೆಗೆ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಮಹಿಳಾ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಇದ್ದರೂ, ಹಿಂದುಳಿದವರಿಗೆ ಅವಕಾಶ ನೀಡುವಂತೆ ಮೊದಲೆ ತಿಳಿಸಿದ್ದೆ. ಅದರಂತೆ ಯಾದವ ಸಮಾಜದ ಪದ್ಮಾವತಿ ನರಸಿಂಹಮೂರ್ತಿಗೆ ಕುಮಾರಸ್ವಾಮಿ ಅವಕಾಶ ನೀಡಿದ್ದಾರೆ ಎಂದರು.ಪದ್ಮಾವತಿ ಆಯ್ಕೆ ಕುರಿತಂತೆ ಆಸ್ಪತ್ರೆಯಿಂದಲೇ ಕುಮಾರಸ್ವಾಮಿ ಲೆಟರ್ ಬರೆದು ಸೀಲ್ಡ್ ಕವರ್ ನಲ್ಲಿ ಕಳಿಸಿದ್ದಾರೆ. ಅದನ್ನು ನಾನು ಕೂಡಾ ತೆರದು ನೋಡಿಲ್ಲ. ಪಕ್ಷದ ಮುಖಂಡರೇ ಅದನ್ನು ತೆರೆದಿದ್ದಾರೆ ಎಂದು ದೇವೇಗೌಡ ಹೇಳಿದರು.ಬಿಬಿಎಂಪಿ ಮೈತ್ರಿ ಬೇರೆ ಕಡೆ ಅನ್ವಯ ಆಗುವುದಿಲ್ಲ.ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು
Comments