ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ : ಉಮಾಶ್ರೀ

2008ರ ಚುನಾವಣೆಯಲ್ಲಿ ಉಮಾಶ್ರೀ ಗೆಲ್ಲಿಸಿದರೆ ಕ್ಷೇತ್ರದಲ್ಲಿ ಇರುವುದಿಲ್ಲ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಆದರೂ, ಅಲ್ಲಿಯೇ ಇದ್ದು ಗೆಲುವು ಸಾಧಿಸಿ ತೋರಿಸಿದ್ದೇನೆ. ಬಿ.ಎಸ್.ಯಡಿಯೂರಪ್ಪ ಮಾತ್ರವಲ್ಲ, ಅವರಿಗಿಂತ ಹೆಚ್ಚಿನ ಶಕ್ತಿವಂತರು ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ನಾನು ಹೆದರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದರು.
ತೇರದಾಳ ವಿಧಾನಸಭಾ ಕ್ಷೇತ್ರದಿಂದ ಓಡಿ ಹೋಗುವುದಿಲ್ಲ. ಸೋಲು–ಗೆಲುವು ನನಗೆ ಹೊಸದಲ್ಲ. ತೇರದಾಳ ಕ್ಷೇತ್ರದಲ್ಲಿ ಒಮ್ಮೆ ಸೋತಿದ್ದೇನೆ. ಸೋಲಿನಿಂದ ಕಂಗೆಡದೆ ಕ್ಷೇತ್ರದಲ್ಲಿಯೇ ಉಳಿದು ಜನರ ವಿಶ್ವಾಸ ಗಳಿಸಿ 2013ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದೇನೆ. ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆ ಮಾಡುವುದಿಲ್ಲ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಖಚಿತವಾಗಿ ಹೇಳಿದರು.
Comments